ನಿನ್ನೆ ಪತಿಯ ಪೂಜೆ.. ಇಂದು ದಿಢೀರ್ ಆತ್ಮಹತ್ಯೆ
ನಿನ್ನೆ ಪತಿಯ ಪೂಜೆ.. ಇಂದು ದಿಢೀರ್ ಆತ್ಮಹತ್ಯೆ
ಭೀಮನ ಅಮಾವಾಸ್ಯೆಯಂದು ಪತಿಯ ಪೂಜೆ ಮಾಡಿದ್ದ ಗೃಹಿಣಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನ ದಾಸನಪುರದ ಅಂಚೆಪಾಳ್ಯದಲ್ಲಿ ಘಟನೆ ನಡೆದಿದೆ.
ಭೀಮನ ಅಮಾವಾಸ್ಯೆಯಂದು ಪತಿಯ ಪೂಜೆ ಮಾಡಿದ್ದ ಗೃಹಿಣಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನ ದಾಸನಪುರದ ಅಂಚೆಪಾಳ್ಯದಲ್ಲಿ ಘಟನೆ ನಡೆದಿದೆ. ಸ್ಪಂದನಾ (24) ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಕನಕಪುರ ಮೂಲದ ಅಭಿಷೇಕ್ ಅವರನ್ನು ಪ್ರೀತಿಸಿ ಸ್ಪಂದನಾ ಮದುವೆಯಾಗಿದ್ದಳು. ನನ್ನ ಸಾವಿಗೆ ಗಂಡ ಅಭಿ ಮತ್ತು ಮನೆಯವರು ಕಾರಣ ಎಂದು ಆತ್ಮಹತ್ಯೆಗೂ ಮುನ್ನ ತಂಗಿಗೆ ಮೆಸೇಜ್ ಕಳುಹಿಸಿದ್ದಳು. ಇದೀಗ ಮಾದನಾಯಕನಹಳ್ಳಿ ಪೊಲೀಸರು ಅಭಿಷೇಕ್‌ನನ್ನು ಬಂಧಿಸಿದ್ದಾರೆ.

