ಕಡಿಮೆ ಬೆಲೆ ಬಾಳುವ ಸ್ಮಾರ್ಟ್ ವಾಚ್
ನೊಣಗಳ ಕಿರಿಕಿರಿಯೇ? ಹೀಗೆ ಮಾಡಿ.. ಮಳೆಗಾಲ ಆರಂಭವಾಗಿದೆ. ಈ ವೇಳೆಯಲ್ಲೇ ನೊಣಗಳು ಕಾಟವೂ ಹೆಚ್ಚಾಗಿರುತ್ತದೆ. ಮನೆಗಳಲ್ಲಿ ಅವುಗಳ ಕಾಟ ಹೆಚ್ಚಾಗಿಯೇ ಇರುತ್ತದೆ. ನೊಣಗಳ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಕೆಲವೊಂದು ಸುಲಭಮಾರ್ಗಗಳಿವೆ. ಕರ್ಪೂರದ ಮೂಲಕ ನಾವು ನೊಣಗಳನ್ನು ತಡೆಯಬಹುದಾಗಿದೆ. ಕರ್ಪೂರ ಹಚ್ಚಿ ಹೊಗೆಯನ್ನು ಮನೆಯ ತುಂಬೆಲ್ಲಾ ಹರಡಿದರೆ ನೊಣಗಳು ಓಡಿ ಹೋಗುತ್ತವೆ. ಅಷ್ಟೇ ಅಲ್ಲದೇ ತುಳಸಿ ಮತ್ತು ಪುದೀನಾ ಗಿಡಗಳನ್ನು ಮನೆಯ ಸಮೀಪ ಬೆಳೆಯುವ ಮೂಲಕ ನೊಣಗಳನ್ನು ತಡೆಯಬಹುದಾಗಿದೆ.

