Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

ಈ ಎರಡು ರಾಶಿಯವರ ಜೀವನದಲ್ಲಿ ದೊಡ್ಡ ಬದಲಾವಣೆ, ಹಣ ಹುಡುಕಿ ಬರುತ್ತೆ webnews kannada

ಈ ಎರಡು ರಾಶಿಯವರ ಜೀವನದಲ್ಲಿ ದೊಡ್ಡ ಬದಲಾವಣೆ, ಹಣ ಹುಡುಕಿ ಬರುತ್ತೆ


ಪ್ರತಿಯೊಂದು ಗ್ರಹವು ನಿರ್ದಿಷ್ಟ ಸಮಯದಲ್ಲಿ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸುತ್ತಲೇ ಇರುತ್ತವೆ. ಸದ್ಯ ಶುಕ್ರನು ಮಕರ ರಾಶಿಗೆ ಬರಲಿದ್ದಾನೆ. ಶುಕ್ರನ ಈ ಸಂಕ್ರಮಣವು ಹಲವು ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ವಿಶೇಷ ಎರಡು ರಾಶಿಯವರಿಗೆ ಹೆಚ್ಚಿನ ಪ್ರಯೋಜನಗಳಿವೆಸಂಪತ್ತು ಮತ್ತು ಸಮೃದ್ಧಿಯನ್ನು ನೀಡುವ ಶುಕ್ರನು ಮಕರ ರಾಶಿಯಲ್ಲಿ ಸಾಗಲಿದ್ದಾನೆ. ಶುಕ್ರನ ಸಂಕ್ರಮಣದ ಕಾರಣ, ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಸಮಯವು ತುಂಬಾ ಮಂಗಳಕರವಾಗಿರುತ್ತದೆ. ಶುಕ್ರನ ಶುಭ ಅಂಶದಿಂದ ಸ್ವಂತ ಮನೆ ಕನಸು ನನಸಾಗಲಿದೆ. ಉದ್ಯೋಗದಲ್ಲಿ ಬಡ್ತಿಯ ಜೊತೆಗೆ ಭಾರೀ ಆರ್ಥಿಕ ಲಾಭ ಇರುತ್ತದೆ. ಶುಕ್ರನು ಮಕರ ರಾಶಿಯಲ್ಲಿ 2024ರ ಡಿಸೆಂಬರ್ 2 ರಿಂದ ಡಿಸೆಂಬರ್ 28 ರವರಿಗೆ ಸಂಚರಿಸುತ್ತಾನೆ. ಈ ಅವದಿಯಲ್ಲಿ ಪ್ರತಿಯೊಂದು ರಾಶಿಯವರಿಗೂ ಉತ್ತಮ ಪ್ರಯೋಜನಗಳಿವೆ. ಅದರಲ್ಲೂ ಮೇಷ ಮತ್ತು ವೃಷಭ ರಾಶಿಯವರಿಗೆ ಏನೆಲ್ಲಾ ಲಾಭಗಳಿವೆ ಎಂಬುದನ್ನು ತಿಳಿಯೋಣ.

ಮೇಷ ರಾಶಿ

ವಿದ್ಯಾರ್ಥಿಗಳು ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಾರೆ. ವಿದ್ಯೆಗೆ ಮೀರಿದ ಜ್ಞಾನವು ಇವರಿಗೆ ಲಭ್ಯವಾಗುತ್ತದೆ, ಆದರೆ ಕುಟುಂಬದ ಹಿರಿಯರ ಜೊತೆಯಲ್ಲಿ ಅನಾವಶ್ಯಕವಾದಂತಹ ಭಿನ್ನಾಭಿಪ್ರಾಯಗಳು ತಲೆದೋರುತ್ತವೆ. ಮುಖ್ಯವಾಗಿ ಆಡುವ ಮಾತಿನ ಮೇಲೆ ಗಮನ ನೀಡುವುದು ಬಹಳ ಮುಖ್ಯವಾಗುತ್ತದೆ. ಆರಂಭಿಸುವ ಕೆಲಸ ಕಾರ್ಯಗಳು ಕಷ್ಟ ಎನಿಸಿದರು ಮಾತಿನ ಬಲದಿಂದ ಪರಿಪೂರ್ಣಗೊಳಿಸುವಿರಿ. ಇದರಿಂದಾಗಿ ಕೆಲಸ ಕಾರ್ಯಗಳಲ್ಲಿ ಎದುರಾಗುವ ಸಮಸ್ಯೆಗಳು ಕ್ಷಣಿಕವಾಗುತ್ತವೆ.

ಈ ಅವಧಿಯಲ್ಲಿ ಹಣಕಾಸಿನ ಕೊರತೆಯು ಕಡಿಮೆಯಾಗುತ್ತದೆ. ಮಕ್ಕಳ ವಿಚಾರದಲ್ಲಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ವಿಫಲರಾಗುತ್ತಾರೆ. ಇವರಲ್ಲಿನ ಹಠದ ಸ್ವಭಾವವು ಬೇರೆಯವರಿಗೆ ಬೇಸರ ಉಂಟು ಮಾಡಿದರೂ ಯಶಸ್ಸಿನ ಹಾದಿಯಲ್ಲಿ ಸಾಗಲು ಸಹಕಾರಿಯಾಗುತ್ತದೆ. ಆದರೆ ಕೋಪದ ಗುಣವೂ ಕಡಿಮೆಯಾದಷ್ಟು ಒಳ್ಳೆಯದು. ಬಾಳಸಂಗಾತಿಯ ಜೊತೆಯಲ್ಲಿ ಬೇಡದ ವಿಚಾರಗಳಿಗೆ ವಾದ ವಿವಾದವಿರುತ್ತದೆ. ಭಯ ಭಕ್ತಿಗಳಿಂದ ಕೆಲವೊಂದು ಧಾರ್ಮಿಕ ಕಾರ್ಯಗಳನ್ನು ಮಾಡುವಿರಿ. ಇರುವ ವಿಚಾರವನ್ನು ಇರುವಂತೆ ನಡೆಯುವ ನಿಷ್ಟುರತೆ ವಿರೋಧಿಗಳನ್ನು ಹೆಚ್ಚಿಸುತ್ತದೆ

ವೃಷಭ ರಾಶಿ

ನಿಮ್ಮ ಪಾಲಿಗೆ ಈ ದಿನಗಳು ಅದೃಷ್ಟದ ದಿನಗಳಾಗಲಿವೆ. ಕುಟುಂಬದಲ್ಲಿ ನಿಮ್ಮ ಮಾತಿಗೆ ಮತ್ತು ಕಾರ್ಯಯೋಜನೆಗೆ ಮನ್ನಣೆ ದೊರೆಯುತ್ತದೆ. ಸಮಾಜದಲ್ಲಿ ಎಲ್ಲರ ಪ್ರೀತಿ ವಿಶ್ವಾಸವನ್ನು ಗಳಿಸುವಿರಿ. ವಿಷ್ಣುವಿಗೆ ಸಂಬಂಧಪಟ್ಟಂತಹ ಯಾತ್ರಾ ಸ್ಥಳಕ್ಕೆ ಭೇಟಿ ನೀಡುವಿರಿ. ನಿಮ್ಮನ್ನು ಮಾತಿನಿಂದ ಗೆಲ್ಲಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ಆಡುವ ಮಾತಿನಲ್ಲಿ ಮೋಡಿ ಮಾಡುವ ಗುಣವಿರುತ್ತದೆ. ಬೇರೆಯವರ ಮನಸ್ಸಿಗೆ ಬೇಸರ ಉಂಟಾಗುವಂತಹ ಕೆಲಸವನ್ನು ಮಾಡುವುದಿಲ್ಲ. ನಿಮಗೆ ಕುಟುಂಬದಲ್ಲಿ ಎಲ್ಲರೊಂದಿಗೆ ಹೊಂದಿಕೊಂಡು ನಡೆಯುವ ಗುಣವಿರುತ್ತದೆ.

ನವ ವಿವಾಹಿತರಿಗೆ ಸಂತಾನ ಲಾಭವಿದೆ

ಹಣಕಾಸಿನ ತೊಂದರೆಯು ಇರುವುದಿಲ್ಲ. ಹಣಸಂಪಾದಿಸುವ ಕಲೆಯು ನಿಮಗೆ ಒಲಿಯುತ್ತದೆ. ಬೇರೆಯವರಿಂದ ಹಣದ ಸಹಾಯವನ್ನು ನಿರೀಕ್ಷಿಸುವುದಿಲ್ಲ. ಆದರೆ ಬೇರೆಯವರಿಗೆ ಸಹಾಯ ಮಾಡುವಲ್ಲಿ ಮುಂಚೂಣಿಯಲ್ಲಿ ಇರುವಿರಿ. ನಿಮ್ಮ ಬಳಿ ಇರುವ ಹಣದಲ್ಲಿ ಅಲ್ಪ ಭಾಗವನ್ನು ಬೇರೆಯವರಿಗಾಗಿ ಖರ್ಚು ಮಾಡುವಿರಿ. ದಂಪತಿ ನಡುವೆ ಉತ್ತಮ ಬಾಂಧವ್ಯ ಇರುತ್ತದೆ. ನವ ವಿವಾಹಿತರಿಗೆ ಸಂತಾನ ಲಾಭವಿದೆ. ಆರೋಗ್ಯದ ಬಗ್ಗೆ ಗಮನವಿರಬೇಕು. ಶೀತದ ತೊಂದರೆ ಕಾಡಬಹುದು. ಅನಿರೀಕ್ಷಿತವಾಗಿ ಮೂಲಗಳಿಂದ ಹಣದ ಸಹಾಯ ದೊರೆಯುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭವಿರುತ್ತದೆ. ಹಣಕಾಸಿನ ವ್ಯವಹಾರದಲ್ಲಿ ದುಡುಕಬಾರದು.

Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close