Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ ರಬ್ಬರ್‌ ಟ್ಯಾಪಿಂಗ್‌ ತರಬೇತಿಯ ಸಮಾರೋಪ ಸಮಾರಂಭ

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ ರಬ್ಬರ್‌ ಟ್ಯಾಪಿಂಗ್‌ ತರಬೇತಿಯ ಸಮಾರೋಪ ಸಮಾರಂಭ


ಉಜಿರೆ : ನೀವು ಕಲಿಯುವ ಕೌಶಲ್ಯವು ನಿತ್ಯ ಪೂಜೆಯ ತರದಲ್ಲಿ ಅಭ್ಯಾಸ ಮಾಡಿದಾಗ ಮಾತ್ರ ಪರಿಪೂರ್ಣವಾಗುತ್ತದೆ. ಈ ಸಿದ್ದವನ ಪರಿಸರದಲ್ಲಿ ಆರಂಭವಾದ ಸಂಸ್ಥೆಗಳು ಅತ್ಯುತ್ತಮವಾದ ಪ್ರಗತಿಯನ್ನು ಹೊಂದಿದೆ. ಇಂದು ರಬ್ಬರ ಕೃಷಿ ಉತ್ತಮವಾದ ಕೃಷಿಯಾಗಿದೆ ಯಾಕೆಂದರೆ ರಬ್ಬರ ಅನೇಕ ವಸ್ತುಗಳ ತಯಾರಿಕೆಗೆ ಪೂರಕವಾಗಿದೆ. 
ರಬ್ಬರ್‌ ಕೃಷಿಯಲ್ಲಿ ರಬ್ಬರ್‌ ಟ್ಯಾಪಿಂಗ್‌  ಮುಖ್ಯ ಪಾತ್ರವಾಗಿದೆ. ಉತ್ತಮವಾದ ಟ್ಯಾಪರ್‌ ಇದ್ದಲ್ಲಿ ಉತ್ತಮವಾದ ಆದಾಯ ಪಡೆಯಲು ಸಾಧ್ಯವಾಗುತ್ತದೆ. ನಿಮ್ಮ ಕೌಶಲ್ಯದಲ್ಲಿ ನಿರಂತರವಾದ ಅಭ್ಯಾಸ ಮಾಡಿ ಅದನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬೇಡಿ. ರಬ್ಬರ್‌ ಸೋಸೈಟಿಯಲ್ಲಿ ರಬ್ಬರ್‌ ಬೆಳೆಗಾರರಿಗೆ ಬೇಕಾದ ಅನುಕೂಲತೆಗಳನ್ನು ಸಹಾಯಧನ ರೂಪದಲ್ಲಿ ಒದಗಿಸುತ್ತಿದೆ ಅದರ ಪ್ರಯೋಜನ ಪಡೆದುಕೊಳ್ಳಿ. ರಬ್ಬರ್‌ ಬೆಳೆಯಲ್ಲಿ ಪರಾವಂಲಬನೆ  ಕಡಿಮೆ.
ಇತರ ಬೆಳೆಗಳಲ್ಲಿ ಪರಾವಂಲಬನೆ ಹೆಚ್ಚು ಇರುತ್ತದೆ. ರಬ್ಬರ್‌ಗೆ ಬೇಡಿಕೆ ಇನ್ನು ಮುಂದಿನಗಳಲ್ಲಿ ಇನ್ನೂ ಆಗುತ್ತದೆ. ನೀವು ಕಲಿತ ವಿದ್ಯೆಯ ನಿಮಗೆ ಯಶಸ್ಸು  ತರಲಿ. ಎಂದು ಉಜಿರೆಯ ಬೆಳ್ತಂಗಡಿ ತಾಲೂಕು ರಬ್ಬರ್‌ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘದ ಅಧ್ಯಕ್ಷರಾದ  ಶ್ರೀಧರ ಜಿ ಭಿಡೆ ಅಭಿಪ್ರಾಯ ಪಟ್ಟರು.

 ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ 10 ದಿನಗಳ ಕಾಲ ನಡೆದ “ರಬ್ಬರ್‌ ಟ್ಯಾಪಿಂಗ್‌ ʼʼ ತರಬೇತಿಯ  ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಪ್ರಮಾಣ ಪತ್ರ  ವಿತ್ತರಿಸಿ ತಮ್ಮ ಅನುಭವದ ಹಂಚಿಕೊಂಡು ತರಬೇತಿಯನ್ನು ಉಪಯೋಗಿಸಿಕೊಂಡು  ಯಶಸ್ವಿಯಾಗಿ ಉದ್ಯಮ ನಡೆಸಿ ಎಂದು ಶುಭ ಹಾರೈಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು  ರುಡ್ ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಾದ  ಬಿ.ಪಿ.ವಿಜಯ ಕುಮಾರ್* ವಹಿಸಿ, ಮಾತನಾಡಿದರು ಸರಕಾರ ಮತ್ತು ಬ್ಯಾಂಕಿನ ಹೊಸ ಯೋಜನೆಯ ಮೂಲಕ ಸಹಾಯಧನ, ಸಾಲ ಪಡೆದುಕೊಂಡು ಉದ್ಯಮ ಆರಂಭಿಸಿ, ಏನಾದರೂ ಮಾಹಿತಿ-ಮಾರ್ಗದರ್ಶನ ಬೇಕಾದರೆ ಸಂಸ್ಥೆಯನ್ನು ಸಂಪರ್ಕಿಸಿ ಎಂದು ಶುಭ ಕೋರಿದರು.


ಅತಿಥಿಗಳನ್ನು ರುಡ್ ಸೆಟ್ ಸಂಸ್ಥೆಯ ನಿರ್ದೇಶಕರಾದ  ಅಜೇಯ  ಅವರು ಸ್ವಾಗತಿಸಿದರು. ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್  ಕಾರ್ಯಕ್ರಮ ನಿರೂಪಿಸಿದರು ಉಪನ್ಯಾಸಕರಾದ ಕೆ.ಕರುಣಾಕರ ಜೈನ್ ವಂದಿಸಿದರು.  ರಾಘವೇಂದ್ರ ಮತ್ತು  ರಮೇಶ್‌ ಪ್ರಾರ್ಥನೆ ಮಾಡಿದರು. ಶಿರಾರ್ಥೀಗಳಾದ  ರಾಜು,  ರಾಘವೇಂದ್ರ,  ಅಖೀಲ್‌ ತನ್ನ ತರಬೇತಿಯ ಅನುಭವ ಹಂಚಿಕೊಂಡರು.

Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close