Vishwa Kundapura kannada
ಹೋರಿಗೆ ಯರ್ಥ ಕೊಡುವುದರ ಮೂಲಕ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಗೆ ವಿಶಿಷ್ಟ ರೀತಿಯಲ್ಲಿ ಚಾಲನೆ
ಖ್ಯಾತ ಚಲನಚಿತ್ರ ನಟ ದಿ. ಸುನೀಲ್ ಅವರ
ಮೂಲ ಮನೆ ಯಡ್ತಾಡಿಯಲ್ಲಿ ಇಂದು ಕಂಬಳ
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಾರ್ಕೂರು
ಶಾಂತರಾಮ್ ಶೆಟ್ಟಿ ಅವರ ಸಂಪೂರ್ಣ
ಸಹಕಾರದೊಂದಿಗೆ
ಬೇಸಾಯದ ಕಾರ್ಯ ಮುಗಿದ ನಂತರ ಆ
ಜೀವಗಳಿಗೆ ಚೆನ್ನಾಗಿ ಮೈ ತೊಳೆಸಿ,ಎತ್ತುಗಳ
ಕೋಡುಗಳಿಗೆ,ಗೊರಸಿಗೆ ,ನೆತ್ತಿಗೆ ಎಣ್ಣೆ
ಹಾಕುತ್ತಾರೆ
ನಂತರ ಅವುಗಳಿಗೆ ,"ಎರ್ಥ ಕೊಡುವ
ಸಂಭ್ರಮ
ಬೇಯಿಸಿದ ಹುರುಳಿ(ಸ್ವಲ್ಪ ಕಾಯಿ ಸುಳಿ,ಉಪ್ಪು
ಸೇರಿಸಿದ್ದು),ಸಣ್ಣಗೆ ಹೋಳು ಮಾಡಿದ ಬೂದು
ಕುಂಬಳಕಾಯಿ,ಅಕ್ಕಿ-ಬೆಲ್ಲ ಇವಿಷ್ಟನ್ನು ಆ
ಪ್ರಾಣಿಗಳಿಗೆ(ಮನೆಯ ಮಕ್ಕಳಂತೆ
ಸಾಕಿದ)ಪ್ರೀತಿಯಿಂದ ಅವುಗಳು ತಿನ್ನುವಷ್ಟು
ನೀಡಿ ಸಂತೋಷಪಡುವ,ಆ ಪ್ರಾಣಿಗಳಿಗೆ
ಕ್ರತಜ್ಞತೆ ತೋರಿಸುವ
ಸಂತೋಷದ,ಸಂಭ್ರಮದ ಕಾರ್ಯವೇ
'"ಯರ್ಥ ಕೊಡುವುದು"
ಟೀಮ್ ಅಭಿಮತ, ಜನಸೇವಾ ಟ್ರಸ್ಟ್
(ರಿ)ಮೂಡು ಗಿಳಿಯಾರು ಆಥಿತ್ಯದಲ್ಲಿ,
ಕುಂದಾಪುರ ಕನ್ನಡದ ಖ್ಯಾತ ವಾಗ್ಮಿ ಮನು
ಹಂದಾಡಿ ಅವರ
ನಿರ್ವಹಣೆಯಲ್ಲಿ,ಕುಂದಾಪುರ ವಿಧಾನಸಭಾ
ಕ್ಷೇತ್ರದ ಶಾಸಕರಾದ ಕಿರಣ್ ಕೊಡ್ಗಿ, ಕಿಶೋರ್
ಕುಂದಾಪುರ,ಯಡ್ತಾಡಿ ಪಂಚಾಯತ್
ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಹಾಗೂ
ಇನ್ನಿತರ ಗಣ್ಯರ ಉಪಸ್ಥಿತಿಯಲ್ಲಿ ಹೋರಿಗೆ
ಯರ್ಥಕೊಡುವುದರ ಮೂಲಕ ವಿಶ್ವಕಂದಾಪ್ರ
ಕನ್ನಡ ದಿನಾಚರಣೆಗೆ ವಿದ್ಯುಕ್ತವಾಗಿ ಚಾಲನೆ
ನೀಡಲಾಯಿತು
ಕರಾವಳಿ,web news kannada