Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

ದೇವರ ಪೂಜೆಗೆ ಬಳಸುವ ಅಗರಬತ್ತಿ ಎಷ್ಟು ಸುರಕ್ಷಿತ ಗೊತ್ತಾ?

ದೇವರ ಪೂಜೆಗೆ ಬಳಸುವ ಅಗರಬತ್ತಿ ಎಷ್ಟು ಸುರಕ್ಷಿತ ಗೊತ್ತಾ?

webNews

ದೇವರ ಪೂಜೆಗೆ ಬಳಸುವ ಅಗರಬತ್ತಿ ಎಷ್ಟು ಸುರಕ್ಷಿತ ಗೊತ್ತಾ? ಯಾವುದೇ ಪೂಜೆ, ದೇವರ ಕಾರ್ಯಕ್ರಮಗಳಲ್ಲಿ ಅಗರಬತ್ತಿ ಹಚ್ಚಿಡುವುದು ಸಾಮಾನ್ಯ. ಅಗರಬತ್ತಿ ಇಲ್ಲದೆ ಪೂಜೆಯು ಸಂಪನ್ನವಾಗದು ಎಂದು ಹೆಚ್ಚಿನ ಜನರು ಭಾವಿಸಿರುವರು. ಇದಕ್ಕಾಗಿ ಸಾಕಷ್ಟು ಪ್ರಮಾಣದಲ್ಲಿ ಅಗರಬತ್ತಿಗಳನ್ನು ಹಚ್ಚಿಡುವರು. ಆದರೆ ಇಂದಿನ ದಿನಗಳಲ್ಲಿ ಅಗರಬತ್ತಿಗಳಿಗೆ ಕೂಡ ಸುವಾಸನೆ ಭರಿಸಲು ರಾಸಾಯನಿಕಗಳನ್ನು ಅಳವಡಿಸುವ ಕಾರಣದಿಂದಾಗಿ ಇದರ ಹೊಗೆಯು ಆರೋಗ್ಯಕ್ಕೆ ಹಾನಿ ಉಂಟು ಮಾಡುವುದು. ಈ ಬಗ್ಗೆ ಎಚ್ಚರ ವಹಿಸಿದರೆ ಒಳ್ಳೆಯದು ಇತ್ತೀಚಿನ ಅಧ್ಯಯನವೊಂದರ ಪ್ರಕಾರ ಅಗರಬತ್ತಿಯಿಂದಾಗಿ ಆರೋಗ್ಯಕ್ಕೆ ಅಪಾಯವಿದೆ. ಅಗರಬತ್ತಿಯಿಂದಾಗಿ ಮನೆಯಲ್ಲಿ ವಾಯುಮಾಲಿನ್ಯವು ಉಂಟಾಗುವುದು, ಅದರಲ್ಲೂ ಕಾರ್ಬನ್ ಮೊನೊಕ್ಸೈಡ್ ನಿರ್ಮಾಣವಾಗುವುದು. ಮನೆಯ ಒಳಗಡೆ ವಾಯು ಮಾಲಿನ್ಯ ನಿರ್ಮಾಣ ಮಾಡುವ ಕಾರಣದಿಂದಾಗಿ ಇದು ಶ್ವಾಸಕೋಶದ ಅಂಗಾಂಶಗಳಲ್ಲಿ ಉರಿಯೂತ ಉಂಟು ಮಾಡುವುದು ಮತ್ತು ಇದರಿಂದಾಗಿ ಉಸಿರಾಟದ ತೊಂದರೆಯು ಕಾಣಿಸಿಕೊಳ್ಳಬಹುದು. ಹೊಗೆಯನ್ನು ಅತಿಯಾಗಿ ಸೇವನೆ ಮಾಡಿದರೆ ಆಗ ಇದರಿಂದ ಹೆಚ್ಚಿನ ಜನರಲ್ಲಿ ಕೆಮ್ಮು ಮತ್ತು ಶೀನು ಉಂಟಾಗಬಹುದು. ಅಪರೂಪದಲ್ಲಿ ಅತಿಯಾಗಿ ಹೊಗೆ ಸೇವನೆಯಿಂದಾಗಿ ಉಸಿರುಗಟ್ಟುವಿಕೆ ಉಂಟಾಗಬಹುದು.  ಅಗರಬತ್ತಿಯ ಹೊಗೆಗೆ ಅತಿಯಾಗಿ ಒಗ್ಗಿಕೊಂಡರೆ, ಆಗ ಇದರಿಂದ ಚರ್ಮದಲ್ಲಿ ಅಲರ್ಜಿ ಕಾಣಿಸಿಕೊಳ್ಳಬಹುದು. ಮುಖ್ಯವಾಗಿ ಮಕ್ಕಳು ಮತ್ತು ವಯಸ್ಸಾದವರಲ್ಲಿ ಇದು ಕಂಡುಬರಬಹುದು. ಪ್ರತಿನಿತ್ಯವೂ ಅಗರಬತ್ತಿ ಹೊಗೆಗೆ ದೇಹವು ಒಗ್ಗಿಕೊಂಡರೆ ಆಗ ಸೂಕ್ಷ್ಮ ಚರ್ಮವಿರುವವರಲ್ಲಿ ತುರಿಕೆ ಕೂಡ ಕಾಣಿಸಬಹುದು. ಕಣ್ಣರೆಪ್ಪೆ ಮತ್ತು ಹಣೆಯ ನಡುವಿನ ಭಾಗವು ಅಲರ್ಜಿಗೆ ಒಳಪಡುವುದು ಹೆಚ್ಚು ಎಂದು ತಜ್ಞ ವೈದ್ಯರು ಹೇಳುವರು. ಅಗರಬತ್ತಿಯಲ್ಲಿ ಇರುವ ಕೆಲವು ಅಂಶಗಳು ಉರಿಯೂತ ಮತ್ತು ಅಲರ್ಜಿ ಉಂಟು ಮಾಡುವುದು. ನಿತ್ಯವೂ ಅಗರಬತ್ತಿಗೆ ದೇಹವು ಒಗ್ಗಿಕೊಂಡರೆ, ಆಗ ಇದರಿಂದ ತಲೆನೋವು ಹೆಚ್ಚಾಗುವುದು, ಏಕಾಗ್ರತೆ ಕೊರತೆ ಕಾಣಿಸಿಕೊಳ್ಳಬಹುದು. ಮನೆಯ ಒಳಗಡೆ ವಾಯು ಮಾಲಿನ್ಯ ನಿರ್ಮಾಣವಾಗುವ ಕಾರಣ ದಿಂದಾಗಿ ಇದು ರಕ್ತದಲ್ಲಿ ಕಾರ್ಬನ್ ಮೊನೊಕ್ಸೈಡ್ ಮತ್ತು ನೈಟ್ರೋಜನ್ ಆಕ್ಸೈಡ್ ನ ಕೇಂದ್ರೀಕರಣ ಉಂಟು ಮಾಡುವುದು. ಇದು ಅತಿಯಾದರೆ ಆಗ ಇದರಿಂದ ನರವೈಜ್ಞಾನಿಕ ಸಮಸ್ಯೆಗಳು ಕಾಣಿಸಿಕೊಳ್ಳ ಬಹುದು. ಪ್ರತಿನಿತ್ಯವೂ ಅಗರಬತ್ತಿಗೆ ಹೊಗೆಗೆ ಒಗ್ಗಿಕೊಂಡರೆ, ಆಗ ಇದರಿಂದ ಶ್ವಾಸಕೋಶದ ಕ್ಯಾನ್ಸರ್ ಬರುವ ಅಪಾಯವು ಹೆಚ್ಚಾಗಿರುವುದು. ಅಗರಬತ್ತಿಯ ಹೊಗೆಯಿಂದಾಗಿ ಶ್ವಾಸಕೋಶದ ಮೇಲ್ಭಾಗದ ಕ್ಯಾನ್ಸರ್ ಅಪಾಯವು ಅಧಿಕವಾಗಿರುವುದು. ಸಾಮಾನ್ಯ ಜನರಿಗಿಂತ ಅಗರಬತ್ತಿ ಹೊಗೆ ಸೇವನೆ ಮಾಡುವಂತಹ ಜನರಲ್ಲಿ ಇದು ಅಧಿಕವಾಗಿ ಕಂಡು ಬರುವುದು ಎಂದು ಅಧ್ಯಯನಗಳು ಹೇಳಿವೆ.


Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close