Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

ಬಾರಕೂರು ಬ್ರಾಹ್ಮಣ ಮಹಾಸಭಾ ಸೇವಾ ಟ್ರಸ್ಟ್ (ರಿ) ಬಾರಕೂರು ಇದರ ವಾರ್ಷಿಕ ಮಹಾಸಭೆ

ಬಾರಕೂರು ಬ್ರಾಹ್ಮಣ ಮಹಾಸಭಾ ಸೇವಾ ಟ್ರಸ್ಟ್ (ರಿ) ಬಾರಕೂರು ಇದರ ವಾರ್ಷಿಕ ಮಹಾಸಭೆ

webNews

ಬಾರಕೂರು ಬ್ರಾಹ್ಮಣ ಮಹಾಸಭಾ ಸೇವಾ ಟ್ರಸ್ಟ್ (ರಿ) ಬಾರಕೂರು ಇದರ ವಾರ್ಷಿಕ ಮಹಾಸಭೆ, ವಿಧ್ಯಾರ್ಥಿ ವೇತನ ವಿತರಣೆ,ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ತುಳುವೇಶ್ವರ ಶ್ರೀ ಗೋಪಾಲಕೃಷ್ಣ ದೇವಸ್ಥಾನ ದಲ್ಲಿ ಜರುಗಿತು. ಉಡುಪಿ ಸು ಹಾ ಸಮ್ ಇದರ ಅಧ್ಯಕ್ಷ ಮತ್ತು ಬರಹಗಾರ  ಶಾಂತರಾಜ ಐತಾಳ್, ಲೇಖಕಿ ಶ್ರೀಮತಿ ಸವಿತಾ ಮಾಧವ ಶಾಸ್ತ್ರಿ, ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ದ ಅಧ್ಯಕ್ಷ  ಸಂದೀಪ್ ಕುಮಾರ್ ಮಂಜರು ಮತ್ತು ಬ್ರಹ್ಮಾವರ ತಾಲೂಕು ಬ್ರಾಹ್ಮಣ ಮಹಾಸಭಾ ದ ಅಧ್ಯಕ್ಷರಾದ  ಕೆ.ಅಶೋಕ್ ಭಟ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಶೈಕ್ಷಣಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ 13 ವಿಧ್ಯಾರ್ಥಿ ಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. 28 ವಿದ್ಯಾರ್ಥಿಗಳಿಗೆ ₹ 98,000/- ವಿಧ್ಯಾರ್ಥಿ ವೇತನ ವಿತರಿಸಲಾಯಿತು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಶ್ರೀ ಕೂರಾಡಿ ರಾಮ ಬಾಯರಿ, ಶ್ರೀ ಮಸ್ಕಿಬೈಲು ರಾಘವೇಂದ್ರ ರಾವ್, ಶ್ರೀ ಉಜಿರೆಬೈಲು ಮೋಹನ್ ಭಟ್ ಮತ್ತು ಶ್ರೀಮತಿ ಸುಶೀಲಮ್ಮ ಮತ್ತು ಶ್ರೀ ಮಹಾಬಲೇಶ್ವರ ಭಟ್ ದಂಪತಿಯನ್ನು ಸನ್ಮಾನಿಸಲಾಯಿತು.

ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ಎನ್ ಮಂಜುನಾಥ ಭಟ್ ಅವರು ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಕಾರ್ಯದರ್ಶಿ ಪ್ರಕಾಶ್ ತಂತ್ರಿ ಅತಿಥಿ ಗಳನ್ನು ಪರಿಚಯಿಸಿ ಸ್ವಾಗತಿಸಿದರು. ಖಜಾಂಜಿ ಶ್ರೀ ಸುದರ್ಶನ ಉಡುಪರು ಆರ್ಥಿಕ ವರದಿ ಯನ್ನು ಓದಿದರು. ಶ್ರೀ ಗಣೇಶ್ ರಾವ್, ಶ್ರೀ ಶ್ರೀನಿವಾಸ ಸೋಮಯಾಜಿ, ಶ್ರೀ ಪ್ರಶಾಂತ್ ಅಡಿಗ ಮತ್ತು ಶ್ರೀಮತಿ ಸಾವಿತ್ರಿ ಮಧ್ಯಸ್ಥ ಅವರು ಸನ್ಮಾ ನಿತರನ್ನು ಸಭೆಗೆ ಪರಿಚಯಿಸಿದರು. ಶ್ರೀ ಅಭಯ್ kedlaaya ವಿಧ್ಯಾರ್ಥಿಗಳ ವಿವರವನ್ನು ವಾಚಿಸಿದರು. ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಆಯೋಜಿಸಲಾದ ಹೂ ಕಟ್ಟುವ ಸ್ಪರ್ಧೆಯಲ್ಲಿ ವಿಜೇತ ರಾದ ಮಹಿಳೆಯರಿಗೆ ಶ್ರೀಮತಿ ಜ್ಯೋತಿ ಮತ್ತು Dr. ವೆಂಕಟ್ ರಾಜ್ ಅವರು ಪ್ರಾಯೋಜಿಸಿದ ಬಹುಮಾನಗಳನ್ನು ವಿತರಿಸಲಾಯಿತು. ಕಾರ್ಯಕಾರಿ ಸಮಿತಿಯ ಶ್ರೀ ಸುಬ್ರಹ್ಮಣ್ಯ ಕೆದಿಲಾಯ, Dr. ಅನುಪಮ ನಿರಂಜನ್, ಶ್ರೀ ಸೀತಾರಾಮ ಶಾಸ್ತ್ರಿ ಶ್ರೀಮತಿ ಪ್ರಭಾವತಿ ಕೆದಿಲಾಯ ಮತ್ತಿತರರು ಸಹಕರಿಸಿದರು. ಜೊತೆ ಕಾರ್ಯದರ್ಶಿ ಶ್ರೀ ಸುರೇಶ್ ಬಾಯರಿ ಧನ್ಯವಾದ ಸಮರ್ಪಿಸಿದರು. ಶ್ರೀ ತಪನ್ ಮತ್ತು ಶ್ರೀ ಅಂಶುಮಾನ್ ರಾವ್ ಅವರು ನಿರೂಪಿಸಿದರು.ವಲಯದ 225 ಕೂ ಅಧಿಕ ವಿಪ್ರ ಬಾಂಧವರು ಭಾಗವಹಿಸಿದ ಕಾರ್ಯಕ್ರಮವು ವಿಶೇಷವಾಗಿ ಜಿಲ್ಲಾ ಮತ್ತು ತಾಲ್ಲೂಕು ಅಧ್ಯಕ್ಷರ ಪ್ರಶಂಸೆಗೆ ಪಾತ್ರವಾಯಿತು ಮತ್ತು ಶ್ರೀಮತಿ ಪುಷ್ಪಾ ರಾವ್ ಅವರು ಪ್ರಾಯೋಜಿಸಿದ ಉಪಾಹಾರ ಸ್ವೀಕಾರದೊಂದಿಗೆ ಯಶಸ್ವಿಯಾಗಿ ಸಂಪನ್ನ ಗೊಂಡಿತು.


Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close