ಮಧ್ಯಪ್ರದೇಶ: ತುಂಬು (pregnant) ಗರ್ಭಿಣಿಯ ಕೈ ಕಾಲುಗಳನ್ನು ಕತ್ತರಿಸಿ ಸಜೀವವಾಗಿ ದಹನ ಮಾಡಿರುವ ಬೀಕರ ಹತ್ಯೆ ಪ್ರಕರಣ ಮಧ್ಯಪ್ರದೇಶದ ರಾಜ್‌ಗರ್‌ನಲ್ಲಿ ನಡೆದಿದೆ. ರೀನಾ ತನ್ವರ್(23) ಕೊಲೆಯಾದ ಗರ್ಭಿಣಿ. ವರದಕ್ಷಿಣೆ ತರುವಂತೆ ಗಂಡ ಹಾಗೂ ಮನೆಯವರು ನಮ್ಮ ಮಗಳನ್ನು ವರ್ಷಗಳಿಂದ ಪೀಡಿಸುತ್ತಿದ್ದು, ಇದೀಗ ತುಂಬು ಗರ್ಭಿಣಿಯಾಗಿರುವಾಗಲೇ ಬರ್ಬರವಾಗಿ ಕೊಲೆ ಮಾಡಿರುವುದಾಗಿ ಯುವತಿ ಪೋಷಕರು ಆರೋಪಿಸಿದ್ದಾರೆ ಕಾಳಿಪೀತ್ ಪೊಲೀಸ್ ಠಾಣೆ ವ್ಯಾಪ್ತಿಯ ತಂಡಿ ಖುರ್ದ್ ಗ್ರಾಮದಲ್ಲಿ ಈ ದಾರುಣ ಘಟನೆ ನಡೆದಿದೆ. ನಿನ್ನೆ ಕೊಲೆಯಾದ ಬಗ್ಗೆ ರೀನಾ ಕುಟುಂಬಕ್ಕೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಗರ್ಭಿಣಿ ಯುವತಿಯ ಕೈ ಮತ್ತು ಕಾಲುಗಳನ್ನು ತುಂಡರಿಸಿ, ಹತ್ಯೆಗೈದು ಮತ್ತು ಆಕೆಯ ವಿರೂಪಗೊಂಡ ದೇಹಕ್ಕೆ ಬೆಂಕಿ ಹಚ್ಚಲಾಗಿದೆ. ಯುವತಿಯ ತಂದೆ ರಾಮಪ್ರಸಾದ್ ತನ್ವಾರ್ ಪೊಲೀಸರೊಂದಿಗೆ ಸ್ಥಳಕ್ಕೆ ಆಗಮಿಸಿದಾಗ, ಆಕೆಯ ಗಂಡ ಹಾಗೂ ಅತ್ತೆ ಆಕೆಯ ಉರಿಯುತ್ತಿರುವ ಚಿತೆಯನ್ನು ಬಿಟ್ಟು ಓಡಿಹೋಗಿದ್ದಾರೆ. ರೀನಾ ಅವರ ಕುಟುಂಬ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿತ್ತು. ಆಕೆಯ ಅರ್ಧ ಸುಟ್ಟ ದೇಹವನ್ನು ಹೊರತೆಗೆದು ನಂತರ ಅದನ್ನು ಬಟ್ಟೆಯಲ್ಲಿ ಸುತ್ತಿ ಶವಪರೀಕ್ಷೆಗೆ ಕಳುಹಿಸಲಾಗಿದೆ 5 ವರ್ಷದ ಹಿಂದೆ ಆಗಷ್ಟೇ 19ವರ್ಷ ತುಂಬಿದ್ದ ಮಗಳು ರೀನಾಳನ್ನು ಪೋಷಕರು ಮಿಥುನ್‌ಗೆ ಮದುವೆ ಮಾಡಿ ಕೊಟ್ಟಿದ್ದರು. ಈ ಜೋಡಿಗೆ ಒಂದು ಹೆಣ್ಣು ಮಗು ಇದ್ದು, ರೀನಾ 2ನೇ ಮಗುವಿಗಾಗಿ ಮತ್ತೆ ಗರ್ಭಿಣಿಯಾಗಿದ್ದರು. ಕಾಳಿಪೀಠ್ ಪೊಲೀಸ್ ಠಾಣೆ ಇನ್‌ಚಾರ್ಜ್ ರಜನೀಶ್ ಸಿರೊಥಿಯಾ ಮಾತನಾಡಿ, ಘಟನೆಗೆ ಸಂಬಂಧದಂತೆ ಕೇಸ್ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಹೀನಾ ಕೃತ್ಯಗೈದವರ ವಿರುದ್ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
Webnews kannada
Webnews kannada 2
Webnews kannada-3
WebNews kannada- 4
ಒಳ ಪೋಸ್ಟ್ -5
Popular Posts
ಕಾರ್ಕಡ-ನೇಣು ಬಿಗಿದು ವಿದ್ಯಾರ್ಥಿ ಆತ್ಮಹತ್ಯೆ-karavalivani
11 ಜುಲೈ, 2022
ಅಮ್ಮನ ಅನಾರೋಗ್ಯ. ಆರ್ಥಿಕ ಸಹಾಯ ಮಾಡುವಂತೆ ಮಗನ ಮನವಿ
10 ಆಗ, 2022
ಕೋಟ ಠಾಣೆಗೆ ನೂತನ ಪಿ ಎಸ್ ಐ ಮಧು.ಬಿ-karavalivani
8 ಜನ, 2022

