Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

(Kundapura)ಕುಂದಾಪ್ರ ಭಾಷಾ ಅಧ್ಯಯನ ಪೀಠಕ್ಕೆ 50 ಲಕ್ಷ ರೂ. ಅನುದಾನ ಮಂಜೂರು-webnewskannada

 

www.webnewskannada.com

ಕುಂದಾಪುರ: ಕುಂದಾಪ್ರ ಭಾಷಾ ಅಧ್ಯಯನ ಪೀಠಕ್ಕೆ 

 50 ಲಕ್ಷ ರೂ. ಅನುದಾನ ನೀಡಿ ರಾಜ್ಯ ಸರ್ಕಾರ

ಆದೇಶ ಹೊರಡಿಸಿದೆ.

ಭಾಷಾ ಅಧ್ಯಯನ ಪೀಠದ ಚಟುವಟಿಕೆಗಳಿಗೆ

ಅನುಕೂಲವಾಗುವಂತೆ ಕಾರ್ಯಚಟುವಟಿಕೆಗಳನ್ನು

 ವಿಸ್ತರಣೆ ಮಾಡಲು ಅಗತ್ಯವಿರುವ ಅನುದಾನ

 ನೀಡುವಂತೆ ಮಂಗಳೂರು ವಿಶ್ವವಿದ್ಯಾಲಯ ಈ

 ಹಿಂದೆ ಸರ್ಕಾರಕ್ಕೆ ಪತ್ರ ಬರೆದಿದ್ದು, ಈ ವಿಚಾರ

 ಸರ್ಕಾರ ಮಟ್ಟದಲ್ಲಿ ಬಾಕಿ ಉಳಿದಿತ್ತು.

ಕಳೆದ ಫೆಬ್ರವರಿ ತಿಂಗಳಲ್ಲಿ ರಾಜ್ಯ ಹಿಂದುಳಿದ

 ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ, ಮಾಜಿ

 ಸಂಸದ ಕೆ.ಜಯಪ್ರಕಾಶ ಹೆಗ್ಡೆ ಅವರು, ಈ ವಿಚಾರದ

 ಕುರಿತು ಸರ್ಕಾರಕ್ಕೆ ಪತ್ರ ಬರೆದು, ಉಡುಪಿ ಜಿಲ್ಲಾ

 ವ್ಯಾಪ್ತಿಯ ಕುಂದಾಪುರ, ಬೈಂದೂರು, ಬ್ರಹ್ಮಾವರ

 ತಾಲ್ಲೂಕುಗಳಲ್ಲಿ ಪೂರ್ಣವಾಗಿ, ಹೆಬ್ರಿ, ಕಾಪು ಉಡುಪಿಯೂ ಸೇರಿದಂತೆ ಕೆಲವು ಭಾಗಗಳಲ್ಲಿ ಮಾತೃ

 ಭಾಷೆಯಾಗಿ ಬಳಸುತ್ತಿರುವ ಕುಂದಾಪ್ರ ಭಾಷೆಯನ್ನು

 ಅಭಿವೃದ್ಧಿ ಪಡಿಸುವ ಸಲುವಾಗಿ ಕುಂದಗನ್ನಡ

 ಭಾಷೆಯ ಅಧ್ಯಯನ ಪೀಠದ ರಚನಾತ್ಮಕ

 ಕಾರ್ಯಗಳಿಗಾಗಿ ಕೊಡಲೇ ಒಂದೂವರೆ ಕೋಟಿ

 ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ

 ಸಿದ್ದರಾಮಯ್ಯನವರಿಗೆ ಮಾಡಿದ್ದ ಮನವಿಗೆ,

 ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದರು.

ಈ ಹಿನ್ನೆಲೆಯಲ್ಲಿ ಸರ್ಕಾರ ಇದೀಗ ಮೊದಲ ಹಂತದ

 50 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದೆ.

ಮುಂದೆ ಹಂತ ಹಂತವಾಗಿ ಹಣ ಬಿಡುಗಡೆಯಾಗುವ

 ಭರವಸೆ ಇದೆ.

Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close