Hd deve Gowdaದೇವೇಗೌಡ: ಹೆಚ್ಡಿಡಿ ನೀಡಿದ ಕಲಾಕೃತಿಗೆ Modiಮೋದಿ ಫಿದಾ webnews kannada 25 ಜುಲೈ, 2024 ದೇವೇಗೌಡ: ಹೆಚ್ಡಿಡಿ ನೀಡಿದ ಕಲಾಕೃತಿಗೆ ಮೋದಿ ಫಿದಾ ದೇವೇಗೌಡ: ಹೆಚ್ಡಿಡಿ ನೀಡಿದ ಕಲಾಕೃತಿಗೆ Modi ಮೋದಿ ಫಿದಾ ದೆಹಲಿ, ಜುಲೈ 25: ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಶಿರೂರು (Shiroor) ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ರಾಜ್ಯಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಅವರು ಪ್ರಸ್ತಾಪಿಸಿದ್ದಾರೆ. ಇದೀಗ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಹೆಚ್ಡಿ ದೇವೇಗೌಡ ಅವರು ವೀಲ್ಚೇರ್ನಲ್ಲಿ ಬಂದು ಭೇಟಿ ಮಾಡಿದ್ದಾರೆ. ಈ ವೇಳೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಉಪಸ್ಥಿತರಿದ್ದು, ಮಹತ್ವದ ಚರ್ಚೆ ಮಾಡಲಾಗಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಬಜೆಟ್ ಮಂಡಿಸಿದ್ದು, ಪ್ರತ್ಯೇಕವಾಗಿ ಕರ್ನಾಟಕಕ್ಕೆ ಏನು ಘೋಷಿಸಿರಲಿಲ್ಲ. ಹಾಗಾಗಿ ಟೀಕೆ ಕೂಡ ವ್ಯಕ್ತವಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಹೆಚ್ಡಿ ಕುಮಾರಸ್ವಾಮಿ ಬೇರೆ ಬೇರೆ ಯೋಜನೆಗಳನ್ನು ಕರ್ನಾಟಕ್ಕೆ ತರುವ ಬಗ್ಗೆ ಪ್ರಸ್ತಾಪಿಸಿದ್ದರು. ಅದರ ಬೆನ್ನೆಲ್ಲೇ ಇದೀಗ ಪ್ರಧಾನಿ ಮೋದಿ ಭೇಟಿ ಮಾಡಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಅವರು ನನಗೆ ನೀಡಿದ ಕಲಾಕೃತಿಗೆ ನಾನು ಕೃತಜ್ಞನಾಗಿದ್ದೇನೆ. ಇದು ನನ್ನ ಇತ್ತೀಚಿನ ಕನ್ಯಾಕುಮಾರಿ ಭೇಟಿಯನ್ನು ನೆನಪಿಸಿತು ಎಂದು ತಮ್ಮ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.