Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

Parle-G biscuit ಪಾರ್ಲೆ ಜಿ ಬಿಸ್ಕೆಟ್ ಪ್ಯಾಕೆಟ್ ಮೇಲಿದ್ದ ಮಗುವಿನ ಫೋಟೊ ಯಾರದ್ದು ? ಗೊತ್ತಾ

ಪಾರ್ಲೆ ಜಿ ಬಿಸ್ಕೆಟ್ ಭಾರತದ ಬೋಲ್ಡ್ ಬಿಸ್ಕೆಟ್ ಉತ್ಪನ್ನಗಳಲ್ಲೊಂದು. 80 ಹಾಗೂ 90ರ ದಶಕದಲ್ಲಿ ಮಕ್ಕಳಿಗೆ ಈ ಬಿಸ್ಕೆಟ್ ಒಂದು ಸವಿನೆನಪು. ಅಂದಿನಿಂದ ಇಂದಿಗೂ ಈ ಬೆಸ್ಕೆಟ್‌ನ ಅಭಿಮಾನಿಗಳು ಇದ್ದಾರೆ. ಅಭಿಮಾನಿಗಳ ಸಂಖ್ಯೆ ಸಹ ಕಮ್ಮಿ ಆಗಲಿಲ್ಲ



85 ವರ್ಷಗಳಷ್ಟು ಇತಿಹಾಸ ಹೊಂದಿರುವ 'ಪಾರ್ಲೆ' ಕಂಪನಿಯ ಉತ್ಪನ್ನವಿದು. ಒಂದು ಕಪ್ ಟೀ ಜೊತೆ ಪಾರ್ಲೆ ಜಿ ಬಿಸ್ಕೆಟ್ ಇದ್ದರೆ ಮುಗೀತು ಅನ್ನುವಂತಹ ಕಾಲವಿತ್ತು. ಬೆಳಗಿನ ತಿಂಡಿಗೆ ಪಾರ್ಲೆ-ಜಿ ಬಿಸ್ಕೆಟ್ ಒಂದಿದ್ದರೆ ಸಾಕು ಆದ್ರೀಗ ಆ ಅನುಭವ ಇಂದಿನ ಮಕ್ಕಳಿಗೆ ಸಿಗಲ್ಲ. ಏಕೆಂದರೆ ಮಾರುಕಟ್ಟೆಯಲ್ಲಿ ವಿಧವಿಧವಾದ ಬಿಸ್ಕೆಟ್ ಗಳು ಬಂದಿದೆ ಇದೆಲ್ಲ ಏನೇ ಇದ್ದರೂ, ಪಾರ್ಲೆ ಜಿ ಪ್ಯಾಕೆಟ್ ಮೇಲಿದ್ದ ಪುಟ್ಟ ಬಾಲಕಿ ಸಿಕ್ಕಾಪಟ್ಟೆ ಬಿಸ್ಕೆಟ್‌ನಷ್ಟೇ ಫೇಮಸ್.

ಹಲವು ವರ್ಷಗಳ ಕಾಲ ಪಾರ್ಲೆ ಜಿ ಕಂಪನಿ ಇದೇ ಪುಟ್ಟ ಬಾಲಕಿಯ ಫೋಟೊವನ್ನು ಇಟ್ಟುಕೊಂಡು ಬಿಸ್ಕೆಟ್ ಅನ್ನು ಮಾರಾಟ ಮಾಡುತ್ತಿತ್ತು. ಕಳೆದ ಕೆಲವು ವರ್ಷಗಳಿಂದ ಈ ಬೆಸ್ಕೆಟ್ ಮೇಲಿರುವ ಪುಟ್ಟ ಬಾಲಕಿ ಫೋಟೊ ಸುಧಾಮೂರ್ತಿಯವರದ್ದೇ ಎಂದು ಹೇಳಲಾಗುತ್ತಿತ್ತು. ಅಸಲಿಗೆ ಆ ಫೋಟೊ ಸುಧಾಮೂರ್ತಿಯವರದ್ದಾ? ಈ ಕಂಪನಿಯ ಮಾರ್ಕೆಟಿಂಗ್ ಹೆಡ್ ನೀಡುವ ಇತ್ತೀಚೆಗೆ ನೀಡಿರುವ ಸಂದರ್ಶನದಲ್ಲಿ ಅಸಲಿ ಸತ್ಯ ಬಿಚ್ಚಿಟ್ಟಿದ್ದಾರೆ.



ಒಂದಿಷ್ಟು ದಿನ 'ಪಾರ್ಲೆ ಜಿ' ಬಿಸ್ಕೆಟ್ ಮೇಲಿರುವ ಮಗುವಿನ ಫೋಟೊ ಇನ್‌ಫೋಸಿಸ್ ಮುಖ್ಯಸ್ಥ ನಾರಾಯಣಮೂರ್ತಿ ಅವರ ಪತ್ನಿ ಸುಧಾಮೂರ್ತಿ ಅವರದ್ದೇ ಎಂದು ಸುದ್ದಿಯಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿಯೂ ಈ ವಿಷಯ ಸಿಕ್ಕಾಪಟ್ಟೆ ಚರ್ಚೆಯನ್ನು ಎಬ್ಬಿಸಿತ್ತು. ಈ ಬಗ್ಗೆ ಆ ಕಂಪನಿಯ ಮುಖ್ಯಸ್ಥ ನೀಡಿರುವ ಸಂದರ್ಶನವೀಗ ವೈರಲ್ ಆಗುತ್ತಿದೆ.

ಅಸಲಿಗೆ ಪಾರ್ಲೆ ಜಿ ಬಿಸ್ಕೆಟ್ ಮೇಲಿರುವ ಬಾಲಕಿಯ ಫೋಟೊ ಸುಧಾಮೂರ್ತಿಯವರ ಬಾಲ್ಯದ ಫೋಟೊ ಅಲ್ಲ. ಈಗಾಗಲೇ ಆ ಬಗ್ಗೆ ಸಾಕಷ್ಟು ವರದಿಗಳು ಆಗಿವೆ. ಆದರೂ, ಕೆಲವು ಮಂದಿ ಇನ್ನೂ ಒಪ್ಪುವುದಕ್ಕೆ ರೆಡಿಯಿಲ್ಲ. 

ಸದ್ಯ ಇನ್‌ಸ್ಟಾಗ್ರಾಂನಲ್ಲಿ ಈ ಕಂಪನಿಯ ಮಾರ್ಕೆಟಿಂಗ್ ಹೆಡ್ ಕೃಷ್ಣರಾವ್ ಬುದ್ಧ ನೀಡಿರುವ ಸಂದರ್ಶನ ಎಲ್ಲಾ ಕಡೆ ಸದ್ದು ಮಾಡುತ್ತಿದೆ.ಪಾರ್ಲೆ ಜಿ ಬಿಸ್ಕೆಟ್ ಪ್ಯಾಕ್ ಮೇಲಿರುವ ಮಗುವಿನ ಫೋಟೊ ಜನಪ್ರಿಯ ಲೇಖಕಿ, ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕಿ ಸುಧಾಮೂರ್ತಿಯವರ ಬಾಲ್ಯದ ಫೋಟೊ ಅಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಈ ಬಿಸ್ಕೆಟ್ ಪ್ಯಾಕ್‌ನ ಮೇಲಿರುವ ಮಗು ಈ ಜಗತ್ತಿನಲ್ಲೇ ಇಲ್ಲ ಎಂದು ಹೇಳಿದ್ದಾರೆ. ಅಂದರೆ, ಪಾರ್ಲೆ ಜಿ ಬಿಸ್ಕೆಟ್ ಪ್ಯಾಕ್‌ ಮಾರುಕಟ್ಟೆಗೆ ಬಿಡುವ ವೇಳೆ ಅವರದ್ದೇ ಕಂಪನಿಯ ಗ್ರಾಫಿಕ್ ಡಿಸೈನರ್ ಕಲ್ಪನೆಯಲ್ಲಿ ಮೂಡಿ ಬಂದಿರುವ ಫೋಟೊ ಇದು. ಹೀಗಾಗಿ ಇದು ಈ ಮಗು ರಿಯಲ್ ಲೈಫ್‌ನಲ್ಲಿ ಅಸ್ಥಿತ್ವದಲ್ಲಿ ಇಲ್ಲ ಎಂದು ಹೇಳಿದ್ದಾರೆ ಫೋಟೋ ಯಾರದಾದರೇನು ಆದರೆ ಬಿಸ್ಕೆಟ್ ನ ರುಚಿಯಲ್ಲಿ ಅಂದಿನಿಂದ ಇಂದಿನವರೆಗೂ ಒಂದೇ ರುಚಿಯನ್ನು ಕೊಡುತ್ತಿದೆ ಪಾರ್ಲೆ ಜಿ

Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close