Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

ಆತ್ಮಹತ್ಯೆ ಕಥೆ ಕಟ್ಟಿದ ಪತಿ; ವಿಷಯ ತಿಳಿದ ಮಗನಿಂದ ತಂದೆಯ ಬರ್ಬರ ಹತ್ಯೆ web news kannada


 ದಾವಣಗೆರೆ, ಏ.26: ತಾಯಿ ಸಾವಿಗೆ ಕಾರಣವಾದ ತಂದೆಯನ್ನೇ ಮಗನೊಬ್ಬ ಹತ್ಯೆಗೈದಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು(Jagaluru) ತಾಲೂಕಿನ ಲಕ್ಕಂಪುರ ಗ್ರಾಮದಲ್ಲಿ ನಡೆದಿದೆ. ಹೌದು ಅಂಜನಪ್ಪ( 55) ತನ್ನ ಪತ್ನಿ ತಿಪ್ಪಮ್ಮ(49 ) ಎಂಬುವವರನ್ನು ನೇಣು ಬಿಗಿದು ಕೊಲೆ ಮಾಡಿ, ಆಕೆಯ ಮೈಮೇಲಿದ್ದ ಚಿನ್ನದ ಆಭರಣವನ್ನು ತೆಗೆದುಕೊಂಡು ಹೋಗುವ ಪ್ಲಾನ್ ಮಾಡಿದ್ದ. ಜೊತೆಗೆ ಪತ್ನಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕಥೆ ಕೂಡ ಕಟ್ಟಿದ್ದ. ಈ ವಿಷಯ ಮಗ ಮಗ ರಮೇಶ್​ಗೆ ಗೊತ್ತಾಗಿ ತಂದೆಯನ್ನು ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ್ದಾನೆ.ಇನ್ನು ಕುಡಿತದ ಚಟಕ್ಕೆ ದಾಸನಾಗಿದ್ದ ಅಂಜನಪ್ಪ, ತನ್ನ ಪತ್ನಿಗೆ ಅಂಗನವಾಡಿ ಶಿಕ್ಷಕಿ ಹುದ್ದೆ ಸಿಕ್ಕರೂ ಬೇಡ ಎಂದು ನೌಕರಿ ಬಿಡಿಸಿದ್ದ. ಕುಡುಕ‌ ಗಂಡನ ಕಟ್ಟಿಕೊಂಡ ಆಕೆ, ಗ್ರಾಮದ ಶಾಲೆಯಲ್ಲಿ ಬಿಸಿಯೂಟ ಮಾಡುತ್ತಾ ಮೂರು ಮಕ್ಕಳನ್ನು ಸಲುಹಿ, ಅದರಲ್ಲಿ ಇಬ್ಬರು ಹೆಣ್ಣು ಮಕ್ಕಳನ್ನು ಮದುವೆ ಮಾಡಿದ್ದಳು. ಇನ್ನೇನು ಮಗನ ಮದುವೆ ಯೋಜನೆಯಲ್ಲಿ ಇದ್ದ ಆಕೆಯನ್ನ ಪತಿಯೇ ಬಾರದ ಲೋಕಕ್ಕೆ ಕಳುಹಿಸಿದ್ದಾಬೆಂಗಳೂರಿನಲ್ಲಿ ಕಾರ್ ಚಾಲಕನಾಗಿದ್ದ ಆರೋಪಿ ಮಗ ರಮೇಶ್, ಏ.25 ರಂದು ಸಂಬಂಧಿಕರ ಮದುವೆಗೆ ಬಂದಿದ್ದ. ತಡ ರಾತ್ರಿ ತನ್ನ ತಾಯಿಯನ್ನ ತಂದೆಯೇ ಕೊಲೆ ಮಾಡಿದ್ದಾನೆ ಎಂಬ ವಿಚಾರ ತಿಳಿದು, ಕೂಡಲೇ ಗ್ರಾಮಕ್ಕೆ ಬಂದಿದ್ದ, ಇದೇ ವೇಳೆ ತಂದೆ ಎದುರಿಗೆ ಬಂದಿದ್ದಾನೆ. ತಕ್ಷಣ ಅಲ್ಲಿಯೇ ಇದ್ದ ಕಲ್ಲನ್ನು ಎತ್ತಿ ಹಾಕಿ ತಂದೆಯನ್ನು ಹತ್ಯೆಗೈದಿದ್ದಾನೆ. ತಂದೆಯ ಕುಡಿತದ ಚಟಕ್ಕೆ ಇಡೀ ಕುಟುಂಬ ನಾಶವಾಗಿದೆ. ಮದುವೆಗೆ ಬಂದಿದ್ದ ‌ಮಗ ಜೈಲು ಪಾಲಾದರೆ, ತಾಯಿ-ತಂದೆ ಕೊಲೆಯಾಗಿ ಮಣ್ಣು ಸೇರಿದ್ದಾರೆ.

Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close