ರುಡ್ ಸೆಟ್ ಸಂಸ್ಥೆ, ಬ್ರಹ್ಮಾವರದಲ್ಲಿ ಬ್ಯೂಟೀಪಾರ್ಲರ್ ನಿರ್ವಹಣೆ ತರಬೇತಿ ಉದ್ಘಾಟನೆ webnews kannada
ರುಡ್ ಸೆಟ್ ಸಂಸ್ಥೆ, ಬ್ರಹ್ಮಾವರದಲ್ಲಿ ಬ್ಯೂಟೀಪಾರ್ಲರ್ ನಿರ್ವಹಣೆ ತರಬೇತಿ ಉದ್ಘಾಟನೆ
ಬ್ರಹ್ಮಾವರ : ಬ್ಯೂಟೀಪಾರ್ಲರ್ ಅನ್ನುವ ವೃತ್ತಿಯು ಸೇವೆಯನ್ನು ನೀಡುವಂತಹದಾಗಿರುತ್ತದೆ. ಉತ್ತಮವಾದ ಸೇವೆ ನೀಡಿದಲ್ಲಿ ಹೆಚ್ಚಿನ ಸಂಪಾದನೆ ಮಾಡಬಹುದು. ಸ್ವಾವಲಂಬಿ ಬದುಕನ್ನು ಕಟ್ಟಿಕೊಡಲು ಇಂದು ಭದ್ರ ಬುನಾದಿಯನ್ನು ರುಡ್ ಸೆಟ್ ಸಂಸ್ಥೆ ಹಾಕಿಕೊಡುತ್ತಿದೆ. ಇದು ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮತ್ತು ಬ್ಯಾಂಕಿನ ಮಹತ್ವದ ಕೆಲಸ ಎಂದು ಕುಂಜಿಬೆಟ್ಟು ಕೆನರಾ ಬ್ಯಾಂಕ್ ನ ಹಿರಿಯ ಪ್ರಬಂಧಕರಾದ ಶ್ರೀ ಜಯಂತ ಅಡಿಗ ಅಭಿಪ್ರಾಯ ಪಟ್ಟರು

WEBNEWSKANNADA
WebNewsKannada |
Updated on: nov 10, 2023
ಸರಕಾರದ ಯೋಜನೆಯನ್ನು ಬಳಸಿಕೊಂಡು, ಸಾಮಾಜಿಕ ವಿಮೆಗಳನ್ನು ಸಹ ಮಾಡಿಸಿಕೊಳ್ಳಿ ಯಶಸ್ವಿಯಾಗಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ನಿರ್ದೇಶಕರಾದ ಲಕ್ಷ್ಮೀಶ ಎ.ಜಿ
ಮಾತನಾಡಿ ಬ್ಯೂಟೀಪಾರ್ಲರ್ ತರಬೇತಿಯಲ್ಲಿ ಕೇವಲ ಬ್ಯೂಟೀಪಾರ್ಲರ್ ತರಬೇತಿ ಅಲ್ಲ ಅದರ ಜೊತೆಗೆ ಉದ್ಯಮಶೀಲತೆ ಅಭಿವೃದ್ಧಿ ಇರುತ್ತದೆ ಇದು ವ್ತಕ್ತಿಯಲ್ಲಿ ಮತ್ತು ಜೀವನದಲ್ಲಿ ಹೆಚ್ಚಿನ ಉಪಯೋಗವಾಗುತ್ತದೆ ಎಂದರು.
ಕಾರ್ಯಕ್ರಮದ ಅತಿಥಿಗಳನ್ನು ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಕೆ.ಕರುಣಾಕರ ಜೈನ್ ಸ್ವಾಗತಿಸಿ, ತರಬೇತಿಯ ಮುನ್ನೋಟ ವನ್ನು ನೀಡಿ, ನಿರೂಪಿಸಿದರು ಉಪನ್ಯಾಸಕರಾದ ಸಂತೋಷ ಶೆಟ್ಟಿ ವಂದಿಸಿದರು

.jpeg)

.jpeg)

