ಬೇರೆ ಹೀರೋಗಳ ಸಿನಿಮಾ ಸಾವಿರ ಕೋಟಿ ರೂ. ಗಳಿಸಿದ್ದಕ್ಕೆ ಅಕ್ಷಯ್ ಕುಮಾರ್ ಹೇಳೋದೇನು?
‘ಸಾವಿರ ಕೋಟಿ ರೂಪಾಯಿ ಮೈಲಿಗಲ್ಲು ಸೃಷ್ಟಿ ಆಗಿರುವುದು ಒಳ್ಳೆಯದು. ಹಾಲಿವುಡ್ ಸಿನಿಮಾಗಳ ರೀತಿ ನಾವು 2 ಸಾವಿರ ಕೋಟಿ ಅಥವಾ ಮೂರು ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಆಗುವಂತಹ ಸಿನಿಮಾಗಳನ್ನು ಮಾಡುತ್ತೇವೆ ಎಂಬ ನಂಬಿಕೆ ನನಗಿದೆ’ ಎಂದು ಅಕ್ಷಯ್ ಕುಮಾರ್ ಅವರು ಆಶಾ ಭಾವನೆ ವ್ಯಕ್ತಪಡಿಸಿದ್ದಾರೆ.

ಶಾರುಖ್ ಖಾನ್
WebNewsKannada |
Updated on: Oct 00, 2023
ಒಂದು ಕಾಲದಲ್ಲಿ ನಟ ಅಕ್ಷಯ್ ಕುಮಾರ್ ಅವರು ನಟಿಸಿದ ಎಲ್ಲ ಸಿನಿಮಾಗಳು ಸಕ್ಸಸ್ ಆಗುತ್ತಿದ್ದವು. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರು ಡಲ್ ಆಗಿದ್ದಾರೆ. ಅವರ ಸಿನಿಮಾಗಳು ಸಾಲು ಸಾಲು ಸೋಲು ಕಂಡಿವೆ. ಅದರ ಮಧ್ಯೆ ಬೇರೆ ಹೀರೋಗಳ ಸಿನಿಮಾಗಳು ಸಾವಿರ ಕೋಟಿ ರೂಪಾಯಿ ಬಿಸ್ನೆಸ್ ಮಾಡುತ್ತಿವೆ.



