Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

65 ಮಿಲಿಯನ್​ ಜನರು ನೋಡಿದ ಚಮ್ಮಕ್ ಚಲ್ಲೋ ಡ್ಯಾನ್ಸ್(Chammak Challo Track) ​- webnews kannada

65 ಮಿಲಿಯನ್​ ಜನರು ನೋಡಿದ ಚಮ್ಮಕ್ ಚಲ್ಲೋ ಡ್ಯಾನ್ಸ್​

Chammak Challo: ಅಭಿರಾಮ ಎಂಬ ಕಲಾವಿದರು 26 ದಿನಗಳಲ್ಲಿ 406 ಫ್ರೇಮ್​​ಗಳಲ್ಲಿ ಈ ಬೆಡಗಿಯನ್ನು ಹಿಡಿದಿಟ್ಟಿದ್ದಾರೆ. ನಂತರ ಚಮ್ಮಕ್​ ಚಲ್ಲೋ ಡ್ಯಾನ್ಸ್​ಗೆ ಈಕೆಯಿಂದ ಹೆಜ್ಜೆ ಹಾಕಿಸಿದ್ದಾರೆ. ಹತ್ತು ಮಿಲಿಯನ್​ ಜನರು ಈ ವಿಡಿಯೋ ಲೈಕ್ ಮಾಡಿದ್ದು ಲಕ್ಷಾಂತರ ಜನರು ಕಲಾವಿದರ ಶ್ರಮ, ತಾಳ್ಮೆಯನ್ನು ಅಪಾರವಾಗಿ ಶ್ಲಾಘಿಸಿದ್ದಾರೆ. ಈ ವಿಡಿಯೋ ನೋಡಿದ ನೀವು ಏನಂತೀರಿ?

ಬ65 ಮಿಲಿಯನ್​ ಜನರು ನೋಡಿದ ಚಮ್ಮಕ್ ಚಲ್ಲೋ ಡ್ಯಾನ್ಸ್(Chammak Challo Track) ​- webnews kannada
WEBNEWSKANNADA
WebNewsKannada​ | 

Updated on: Oct ೦೯, 2023


ಕಲಾವಿದರೊಬ್ಬರು 406 ಫ್ರೇಮ್​ಗಳನ್ನು 26 ದಿನಗಳ ಕಾಲ ರಚಿಸಿ ಚಿತ್ರದೊಳಗಿನ ಬೆಡಗಿ ಚಮ್ಮಕ್​ ಚಲ್ಲೋ ಟ್ರ್ಯಾಕ್​ಗೆ (Chammak Challo Track) ಡ್ಯಾನ್ಸ್ ಮಾಡುವಂತೆ ಮಾಡಿದ್ದಾರೆ. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿದ ನೆಟ್ಟಿಗರು ಕಲಾವಿದನ ಜಾಣ್ಮೆಯನ್ನು ಶ್ಲಾಘಿಸುತ್ತಿದ್ದಾರೆ. ಚಮ್ಮಕ್ ಚಲ್ಲೋ ಹಾಡು ರಾ ಒನ್​ ಸಿನೆಮಾದ್ದು. ಶಾರುಖ್ ಖಾನ್ ಮತ್ತು ಕರೀನಾ ಕಪೂರ್ ಈ ಚಿತ್ರದಲ್ಲಿ ನಟಿಸಿದ್ದಾರೆ.ಈ ವಿಡಿಯೋ ಅನ್ನು ಸೆ. 30ರಂದು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಲಾಗಿದ್ದು, ಈ ತನಕ 65 ಮಿಲಿಯನ್​ ಜನರು ನೋಡಿದ್ದಾರೆ. 10 ಮಿಲಿಯನ್​ ಜನರು ಲೈಕ್ ಮಾಡಿದ್ದಾರೆ. ಲಕ್ಷಾಂತರ ಜನರು ಕಲಾವಿದನ ಪ್ರತಿಭೆಗೆ ಶಭಾಷ್​ ಹೇಳಿದ್ದಾರೆ. ಇದು ಶ್ರಮದಿಂದ ಮಾಡಿದ ಕಲೆ, ಕಲಾವಿದನ ತಾಳ್ಮೆಗೆ ಶರಣು ಎಂದಿದ್ದಾರೆ ಅನೇಕರು.ಕಲಾವಿದ ಅಭಿರಾಮ್ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ಹಂಚಿಕೊಂಡು, ‘ಚಮ್ಮಕ್ ಚಲ್ಲೋ ಆರ್ಟಿಸ್ಟ್ ವರ್ಷನ್​’ ಎಂಬ ಒಕ್ಕಣೆ ಬರೆದಿದ್ದಾರೆ. 406 ಫ್ರೇಮ್‌ಗಳನ್ನು 26 ದಿನಗಳಲ್ಲಿ ಮುಗಿಸಿ ನಂತರ ಈ ಸ್ಥಿರ ಚಿತ್ರಗಳಿಗೆ ಚಲನೆ ಒದಗಿಸಲಾಗಿದೆ. ಈ ವಿಡಿಯೋ ಅನ್ನು ಸೆ. 30 ರಂದು Instagram ನಲ್ಲಿ ಹಂಚಿಕೊಳ್ಳಲಾಗಿದೆ. ಅದ್ಭುತವಾದ ಕಲೆ ಇದು ಎಂದಿದ್ದಾರೆ ಒಬ್ಬರು. ಇಂದಿನ ಪ್ರಭಾವಿ ಕಲಾವಿದರ ಕಲೆಗಿಂತ ನಿಮ್ಮ ಕಲೆ ಬಹಳ ಚೆನ್ನಾಗಿದೆ ಎಂದಿದ್ದಾರೆ ಇನ್ನೊಬ್ಬರು.. ನನ್ನ ಕಣ್ಣು ನೋಯುವಷ್ಟು ಸಲ ನಾನು ಈ ವಿಡಿಯೋ ನೋಡಿದ್ದೇನೆ ಎಂದಿದ್ದಾರೆ ಮತ್ತೊಬ್ಬರು. ಎಂಥಾ ಪ್ರತಿಭೆ ಸಹೋದರ ಎಂದಿದ್ದಾರೆ ಇನ್ನೊಬ್ಬರು. ನಿಜಕ್ಕೂ ಈ ಕಲೆಯನ್ನು ನೋಡಿ ನನ್ನ ದಿನ ಸಾರ್ಥಕವಾಯಿತು ಎಂದಿದ್ದಾರೆ ಇನ್ನೂ ಒಬ್ಬರು.

ಈ ವಿಡಿಯೋ ನೋಡಲೂ ಕೆಳಗೆ ಕ್ಲಿಕ್ ಮಾಡಿ  

ಚಮ್ಮಕ ಚಲ್ಲೋ ಬೆಡಗಿಯನ್ನು ನೋಡಿ

ಇದನ್ನೂ ಓದಿ: ನಿಮ್ಮ ಮೊಬೈಲ್ ದೀರ್ಘ ಸಮಯ ಚಾರ್ಜ್ ಬರಬೇಕಾ?: ಈ ಟ್ರಿಕ್ ಫಾಲೋ ಮಾಡಿ
webnewskannada1

webnewskannada2





Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close