Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

4 ವರ್ಷದ ಮಗುವಿನ ತಲೆ ಕತ್ತರಿಸಿ, ರಕ್ತ ಕುಡಿದ ಯುವಕ webnewskannada

4 ವರ್ಷದ ಮಗುವಿನ ತಲೆ ಕತ್ತರಿಸಿ, ರಕ್ತ ಕುಡಿದ ಯುವಕ

 

Posted On: WebNews Kannada
ನವದೆಹಲಿ: ಪಂಜಾಬ್​ನಲ್ಲಿ ಅಮಾನುಷ ಘಟನೆಯೊಂದು ಬೆಳಕಿಗೆ ಬಂದಿದ್ದು, ಮಾಂತ್ರಿಕನ ಸಲಹೆಯಂತೆ ಯುವಕನೊಬ್ಬ 4 ವರ್ಷದ ಬಾಲಕನನ್ನು ನರಬಲಿ ನೀಡಿದ್ದಾನೆ. ಪಕ್ಕದ ಮನೆಯ 4 ವರ್ಷದ ಬಾಲಕನನ್ನು ಮನೆಗೆ ಕರೆದುಕೊಂಡು ಬಂದು, ಆತನ ತಲೆ ಕತ್ತರಿಸಿ, ರಕ್ತ ಕುಡಿದಿದ್ದಾನೆ. ಈ ಭೀಕರ ಘಟನೆ ಬೆಳಕಿಗೆ ಬರುತ್ತಿದ್ದಂತೆ ಆ ಯುವಕನನ್ನು ಬಂಧಿಸಲಾಗಿದೆ. ಈ ರೀತಿಯ ಕೃತ್ಯಕ್ಕೆ ಪ್ರಚೋದನೆ ನೀಡಿದ ಮಾಂತ್ರಿಕ ತಲೆಮರೆಸಿಕೊಂಡಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದ್ದಾರೆ. ಸೋಮವಾರ ರಾತ್ರಿ ಪಕ್ಕದ ಮನೆಯಲ್ಲಿ ಮಲಗಿದ್ದ ಮಗುವನ್ನು ಎತ್ತಿಕೊಂಡು ಮನೆಗೆ ಕರೆದೊಯ್ದ ಯುವಕ ಆ ಮಗುವಿನ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಆತನ ಮನೆಯಲ್ಲಿದ್ದ ರಕ್ತಸಿಕ್ತವಾಗಿದ್ದ ಮಗುವಿನ ಶವವನ್ನು ಪೊಲೀಸರು ವಶಕ್ಕೆ ಪಡೆದು, ಆರೋಪಿಯನ್ನು ಬಂಧಿಸಿದ್ದಾರೆ. ಪಂಜಾಬ್​ನ ಖನ್ನಾದಲ್ಲಿ ಈ ನರಬಲಿ ಪ್ರಕರಣ ಬೆಳಕಿಗೆ ಬಂದಿದೆ.

ಇಲ್ಲಿ ಮಾಂತ್ರಿಕರ ಸಲಹೆಯ ಮೇರೆಗೆ ಯುವಕನೊಬ್ಬ ನೆರೆ ಮನೆಯಲ್ಲಿ ವಾಸಿಸುತ್ತಿದ್ದ 4 ವರ್ಷದ ಮಗುವನ್ನು ಕತ್ತು ಸೀಳಿ ಕೊಂದಿದ್ದಾನೆ. ಆತ ಮಗುವಿನ ರಕ್ತವನ್ನೂ ಕುಡಿದಿರುವ ಘಟನೆ ಪಂಜಾಬ್​ನ ಖನ್ನಾ ಜಿಲ್ಲೆಯ ಸಿಟಿ ಖನ್ನಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿ ಸೋಮವಾರ ತಡರಾತ್ರಿ ಮಗುವನ್ನು ಅಪಹರಿಸಿದ್ದ. ಮಂಗಳವಾರ ಬೆಳಗ್ಗೆ ಆ ಮಗುವಿನ ತಂದೆ-ತಾಯಿಗೆ ಈ ವಿಷಯ ತಿಳಿಯಿತು. ಇದಾದ ನಂತರ ಕಾರ್ಯಾಚರಣೆಗಿಳಿದ ಪೊಲೀಸರು ಕೇವಲ 4 ಗಂಟೆಯೊಳಗೆ ಮಗುವಿನ ಶವವನ್ನು ಹೊರತೆಗೆದು ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿಯನ್ನು ಅರವಿಂದರ್ ಕುಮಾರ್ ಎಂದು ಗುರುತಿಸಲಾಗಿದೆ. ಆತ ಸಮಾಜದಲ್ಲಿ ಶಕ್ತಿಯುತ ವ್ಯಕ್ತಿಯಾಗಬೇಕೆಂದು ಬಯಸಿದ್ದ. ಅಮರನಾಗಬೇಕೆಂದರೆ ಏನು ಮಾಡಬೇಕೆಂದು ಆತ ಮಾಂತ್ರಿಕರ ಬಳಿ ಸಲಹೆ ಕೇಳಿದ್ದ. ಆ ಮಾಂತ್ರಿಕ ಮಗುವನ್ನು ಬಲಿ ನೀಡಿದರೆ ಈ ಸಾಧನೆ ಸಾಧ್ಯ ಎಂದು ಹೇಳಿದ್ದರು ಎಂದು ಆ ಯುವಕ ಪೊಲೀಸ್ ವಿಚಾರಣೆ ವೇಳೆ ತಿಳಿಸಿದ್ದಾನೆ. ಈ ಸಾಧನೆಗಳನ್ನು ನರಬಲಿಯಿಂದ ಮಾತ್ರ ಸಾಧಿಸಲು ಸಾಧ್ಯ ಎಂದು ಸಲಹೆ ನೀಡಿದ ಮಾಂತ್ರಿಕನೇ ನರಬಲಿಯ ವಿಧಾನವನ್ನು ಹೇಳಿಕೊಟ್ಟಿದ್ದರು. ಇದಾದ ಬಳಿಕ ಆ ಯುವಕ ಮಗುವನ್ನು ಬಲಿ ಕೊಟ್ಟಿದ್ದ. ಕೊಲೆಯಾದ 4 ವರ್ಷದ ಮಗು ಸೋಮವಾರ ರಾತ್ರಿ ತನ್ನ ಮನೆಯಲ್ಲಿ ಅಕ್ಕ-ಅಣ್ಣನ ಜೊತೆ ಮಲಗಿತ್ತು. ಆದರೆ ಮಧ್ಯರಾತ್ರಿಯ ನಂತರ ಆರೋಪಿ ಬಂದು ಆ ಮಗುವನ್ನು ರಹಸ್ಯವಾಗಿ ಕರೆದುಕೊಂಡು ಹೋಗಿದ್ದ. ಪೋಷಕರು ಬೆಳಗ್ಗೆ ಎದ್ದು ನೋಡಿದಾಗ ಮಗು ನಾಪತ್ತೆಯಾಗಿರುವ ವಿಷಯ ತಿಳಿದಿತ್ತು. ಮೊದಲಿಗೆ ಕುಟುಂಬಸ್ಥರು ಸುತ್ತ ಮುತ್ತ ಹುಡುಕಾಡಿದರೂ ಮಗುವಿನ ಸುಳಿವು ಸಿಗದಿದ್ದಾಗ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದಾದ ಬಳಿಕ ಕಾರ್ಯಾಚರಣೆಗಿಳಿದ ಪೊಲೀಸರು ಕೇವಲ 4 ಗಂಟೆಯೊಳಗೆ ಮಗುವಿನ ರಕ್ತದಲ್ಲಿ ತೊಯ್ದಿದ್ದ ದೇಹವನ್ನು ಯುವಕನ ಮನೆಯಿಂದ ಹೊರಗೆ ತೆಗೆದಿದ್ದರು. ಮಾಂತ್ರಿಕನ ಪತ್ತೆಗೆ ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ.

ಇದನ್ನೂ ಓದಿ: ನಿಮ್ಮ ಮೊಬೈಲ್ ದೀರ್ಘ ಸಮಯ ಚಾರ್ಜ್ ಬರಬೇಕಾ?: ಈ ಟ್ರಿಕ್ ಫಾಲೋ ಮಾಡಿ
webnewskannada1

webnewskannada2





Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close