ಸಿಸಿ ಟಿ.ವಿ ಅಳವಡಿಕೆ ಮತ್ತು ದುರಸ್ತಿ ತರಬೇತಿಯ ಸಮಾರೋಪ: webnewskannada
ಸಿಸಿ ಟಿ.ವಿ ಅಳವಡಿಕೆ ಮತ್ತು ದುರಸ್ತಿ ತರಬೇತಿಯ ಸಮಾರೋಪ: webnewskannada

webnews kannada |
Updated on: Sep 23, 2023 |
Webnewskannada: ದೇಶದ ಆರ್ಥಿಕ ಅಭಿವೃದ್ಧಿ ಯುವಜನ ಸ್ವಂತ ಉದ್ಯೋಗ ಮಾಡಿದರೆ ಮಾತ್ರ ಸಾಧ್ಯ. ಪ್ರತಿಯೊಬ್ಬರೂ ತನ್ನದೇ ಆದ ಸ್ವಂತ ಉದ್ಯೋಗ ಮಾಡಿದರೆ ಆದಾಯ ಹೆಚ್ಚು ಆಗಲು ಸಾಧ್ಯ ಎಂದು
ಬ್ರಹ್ಮಾವರ ಕ್ರಾಸ್ ಲ್ಯಾಂಡ್ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕರಾದ ನವೀನ್ ಕುಮಾರ್ ಶೆಟ್ಟಿ ಅಭಿಪ್ರಾಯ ಪಟ್ಟರು.ಬ್ರಹ್ಮಾವರ ರುಡ್ ಸೆಟ್ ಸಂಸ್ಥೆಯಲ್ಲಿ 13 ದಿನಗಳ ಕಾಲ ನಡೆಯುವ ಸಿಸಿ ಟಿ.ವಿ ಅಳವಡಿಕೆ ಮತ್ತು ದುರಸ್ತಿ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಪ್ರಮಾಣ ಪತ್ರ ವಿತ್ತರಿಸಿ ಮಾತನಾಡಿದರು ಪರಮ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ನಡೆಸುವ ಕೆಲಸ ಕಾರ್ಯಗಳು ಸಮಾಜಕ್ಕೆ ಪ್ರಯೋಜನಕಾರಿ ಆಗಿದೆ ಎಂದು ಶುಭ
ಹಾರೈಸಿದರು.ತರಬೇತಿಯ ಅತಿಥಿ ಉಪನ್ಯಾಸಕರಾದ ಗುರುರಾಜ್ ಮಾತನಾಡಿ ತಮ್ಮ ಅನುಭವ ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ನಿರ್ದೇಶಕರಾದ ಲಕ್ಷ್ಮೀಶ ಎ.ಜಿ ಮಾತನಾಡಿ ತರಬೇತಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ, ಹೆಚ್ವಿನ ಕಲಿಕೆ ಪಡೆಸುಕೊಂಡಿದ್ದೀರಿ ಇದರ ಸದುಪಯೋಗ ಪಡೆದು ಉದ್ಯಮಿ ಗಳಾಗಿ ದೇಶದ ಅಭಿವೃದ್ಧಿಯಲ್ಲಿ ಭಾಗವಹಿಸಿ ಎಂದರು
ಕಾರ್ಯಕ್ರಮದ ಅತಿಥಿಗಳನ್ನು ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಕೆ.ಕರುಣಾಕರ ಜೈನ್ ಸ್ವಾಗತಿಸಿ, ತರಬೇತಿ ಯ ಹಿನ್ನೋಟ ವನ್ನು ನೀಡಿ, ನಿರೂಪಿಸಿದರು ಉಪನ್ಯಾಸಕರಾದ ಸಂತೋಷ ಶೆಟ್ಟಿಉಪಸ್ಥಿತರಿದ್ದರು. ಹಿರಿಯ ಕಛೇರಿ ಸಹಾಯಕರಾದ ರವಿ ಸಾಲ್ಯಾನ್* ವಂದಿಸಿದರು. ಪ್ರಾರ್ಥನೆ ಯನ್ನು ರಾಘವೇಂದ್ರ ನೆರವೇರಿಸಿದರು. ದಕ್ಷ ,, ಜಯರಾಜ್, ಜಾನ್ಸನ್, ರಾಘವೇಂದ್ರ ತಮ್ಮ ತರಬೇತಿ ಅನುಭವ ಹಂಚಿಕೊಂಡು

