ಕೋಡಿ- ಗ್ರಾಮ ನೈರ್ಮಲ್ಯ(Sanitation Scheme) ಯೋಜನೆ ಬಗ್ಗೆ ಪೂರ್ವಭಾವಿ ಸಭೆ-karavalivani
@karavalivani, @ಕರಾವಳಿವಾಣಿ
ಕೋಟ: ಕೋಡಿ ಗ್ರಾಮ ಪಂಚಾಯತ್ ಕಛೇರಿಯಲ್ಲಿ ಪಂಚಾಯತ್ ಅಧ್ಯಕ್ಷ ಪ್ರಭಾಕರ್ ಮೆಂಡನ್ ರವರ ಅಧ್ಯಕ್ಷತೆಯಲ್ಲಿ ಗ್ರಾಮ ನೈರ್ಮಲ್ಯ ಯೋಜನೆ ಬಗ್ಗೆ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.
ಸಭೆಯಲ್ಲಿ ಘನ ಮತ್ತು ದ್ರವ ತ್ಯಾಜ್ಯ ಸಮರ್ಪಕ ನಿರ್ವಹಣೆಯು ಗ್ರಾಮ ನೈರ್ಮಲ್ಯ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಮಾಲೋಚಕರಾದ ರಂಜಿತ್ ಹಾಗೂ ಶ್ರೀನಿವಾಸ , ಇವರು ಗ್ರಾಮ ನೈರ್ಮಲ್ಯ ಯೋಜನೆಯ ಬಗ್ಗೆ ಮಾಡಬೇಕಾದ ಪೂರ್ವ ಸಿದ್ದತೆಗಳ ಬಗ್ಗೆ ಗ್ರಾಮದಲ್ಲಿ ಸ್ಥಳ ಭೇಟಿ ಮಾಡಿ, ಗ್ರಾಮ ನೈರ್ಮಲ್ಯ ಯೋಜನೆಗೆ ಪೂರಕವಾಗಿ ಗ್ರಾಮ ನಕ್ಷೆಯನ್ನು ರಚಿಸಿದರು.
ಸಭೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯ ಅಂತೋನಿ ಡಿಸೋಜಾ, ಗೀತಾ ಖಾರ್ವಿ, ಕೃಷ್ಣ ಪೂಜಾರಿ ಪಿ, ಜಯಶ್ರೀ, ಕುಮಾರಿ ರಶ್ಮಿತಾ , ವಿನಯ್, ಶ್ರೀ ಪ್ರಸಾದ್, ಕುಸುಮ, ಸಂಜೀವಿನಿ ಒಕ್ಕೂಟ ಸಂಘದ ಅಧ್ಯಕ್ಷ ರೇವತಿ, ಕಾರ್ಯದರ್ಶಿ ಆಶಾ ಹಾಗೂ ಸದಸ್ಯರು, ಎಂ.ಬಿ.ಕೆ , ಎಲ್ ಸಿ ಆರ್ ಪಿ, ಅಂಗನವಾಡಿ ಕರ‍್ಯಕರ್ತೆಯರು, ಆಶ ಕರ‍್ಯಕರ್ತೆಯರು ಹಾಗೂ ಪಂಚಾಯತ್ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ಸ್ವಾಗತಿಸಿದರು. ಕೊನೆಯಲ್ಲಿ ಪಂಚಾಯತ್ ಕರ‍್ಯದರ್ಶಿ ಉಷಾ ಶೆಟ್ಟಿ ಧನ್ಯವಾದಗಳೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಿದರು.

