ಪೋಷಣ್ ಅಭಿಯಾನ ಪರಿಣಾಮಕಾರಿಯಾಗಿ ಅನುಷ್ಠಾನ- ಸತೀಶ್ ವಡ್ಡರ್ಸೆ-Karavalivani
ಈ ಸುದ್ದಿ ಓದಲು ಕ್ಲಿಕ್ ಮಾಡಿ
@karavalivani, @ಕರಾವಳಿವಾಣಿ
ಕೋಟ: ಸದೃಢ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಪೋಷಣ್ ಅಭಿಯಾನ ಕಾರ್ಯಕ್ರಮ ಸಹಕಾರಿ ಎಂದು ಪಾಂಡೇಶ್ವರ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಸತೀಶ್ ವಡ್ಡರ್ಸೆ ಹೇಳಿದ್ದಾರೆ.
ಶುಕ್ರವಾರ ಪಾಂಡೇಶ್ವರ ಗ್ರಾಮಪಂಚಾಯತ್ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕು ಇವರ ಆಶ್ರಯದಲ್ಲಿ ಪಾಂಡೇಶ್ವರ ಗ್ರಾ.ಪಂ., ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಪೋಷಣ್ ಅಭಿಯಾನ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ ವಿಶ್ವದ ಬೇರೆ ಬೇರೆ ದೇಶಗಳ ಆಹಾರ ಪದ್ಧತಿಗಳಿಗೆ ಹೊಲಿಸಿದರೆ ನಮ್ಮ ದೇಶ ಮುಂಚೂಣಿಗೆ ನಿಲ್ಲುತ್ತದೆ.ಕೆಲವೊಂದು ದೇಶಗಳಲ್ಲಿ ಇನ್ನೂ ಪೌಷ್ಠಿಕ ಆಹಾರ ಕೊರತೆಯಿಂದ ಸಮಸ್ಯೆ ಎದುರಿಸುತ್ತಿವೆ ಇದಕ್ಕೆ ಸುಡಾನ್ ,ಮಂಗೋಲಿಯಾ ಇನ್ನಿತರ ದೇಶಗಳೇ ಸಾಕ್ಷಿ ಈ ದಿಸೆಯಲ್ಲಿ ಸರಕಾರ ಸಮೃದ್ಧ ಆರೋಗ್ಯವಂತ ಗರ್ಭಿಣಿಯರ ಕುರಿತಂತೆ ವಿಶೇಷ ಕಾಳಜಿಯ ಕಾರ್ಯಕ್ರಮಗಳನ್ನು ರೂಪಿಸಿದೆ ಎಂದರಲ್ಲದೆ ಇದರ ಅನುಷ್ಠಾನ ಪರಿಣಾಮಕಾರಿಯಾಗಿಸಲು ಕರೆ ನೀಡಿದರು.
ಕಾರ್ಯಕ್ರಮವನ್ನು ಪಾಂಡೇಶ್ವರ ಪಂಚಾಯತ್ ಅಧ್ಯಕ್ಷೆ ಕಲ್ಪನಾ ದಿನಕರ್ ಉದ್ಘಾಟಿಸಿದರು.ಪಂಚಾಯತ್ ಉಪಾಧ್ಯಕ್ಷ ಸ್ವಿಲ್ವಸ್ಟಾರ್ ಡಿಸೋಜ,ಸಾಸ್ತಾನ ಪ್ರಾಥಮಿಕ ಆರೋಗ್ಯಕೇಂದ್ರದ ಧನಲಕ್ಷ್ಮಿ ಪಂಚಾಯತ್ ಕಾರ್ಯದರ್ಶಿ ಉಷಾ,ಸ್ಥಳೀಯ ಪ್ರಾಥಮಿಕ ಶಾಲೆಗಳಾದ ಯಡಬೆಟ್ಟು ಶಾಲೆ ಮುಖ್ಯ ಶಿಕ್ಷಕಿ ಇಂದಿರಾ,ಪಾoಡೇಶ್ವರ ಶಾಲೆಯ ಮುಖ್ಯ ಶಿಕ್ಷಕಿ ಫೋರಿನಾ ಡಿಮೆಲ್ಲೋ,ಸ್ಥಳೀಯ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು,ಪೋಷಕರು ಉಪಸ್ಥಿತರಿದ್ದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಲಕ್ಷ್ಮಿಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಪೌಷ್ಠಿಕ ಆಹಾರ ಮೇಳ ಹಾಗೂ ಜಾಥ ನಡೆಯಿತು.

