ಗಿಳಿಯಾರು ಶಾಂಭವೀ ಶಾಲೆಯ ಕೊಠಡಿ ಹಾನಿ-karavalivani
ಕೋಟ: ಇಲ್ಲಿನ ಗಿಳಿಯಾರು ಶಾಂಭವೀ ವಿದ್ಯಾದಾಯಿನೀ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಅನ್ನದಾಸೋಹ ಕೊಠಡಿಯ ಮೇಲೆ ಮರ ಬಿದ್ದು ಬಾರಿ ಪ್ರಮಾಣದಲ್ಲಿ ಹಾನಿಯಾದ ಘಟನೆ ಸೋಮವಾರ ನಡೆದಿದೆ.
ರಾತ್ರಿ ಹೊತ್ತಿನಲ್ಲಿ ಸುರಿದ ಬಾರಿ ಗಾಳಿ ಮಳೆಗೆ ಭಾರಿ ಗಾತ್ರದ ಅಕಾಶೆ ಮರವೊಂದು ಬಿದ್ದು ಕೊಠಡಿಗೆ ಉಪಯೋಗಿಸಲಾದ ಮರದ ಪಕಾಸೆ ,ಹಂಚು ಹಾನಿಯಾಗಿದೆ.
ಸ್ಥಳಕ್ಕೆ ಕೋಟ ಗ್ರಾಮ ಲೆಕ್ಕಿಗ ಚಲುವರಾಜು,ಕೋಟ ಗ್ರಾ.ಪಂ ಅಧ್ಯಕ್ಷ ಅಜಿತ್ ದೇವಾಡಿಗ ,ಸದಸ್ಯ ಸಂತೋಷ್ ಪ್ರಭು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಇಲ್ಲಿನ ಗಿಳಿಯಾರು ಶಾಂಭವೀ ವಿದ್ಯಾದಾಯಿನೀ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಅನ್ನದಾಸೋಹ ಕೊಠಡಿಯ ಮೇಲೆ ಮರ ಬಿದ್ದು ಹಾನಿಯಾಗಿದೆ.


