ತೆಕ್ಕಟ್ಟೆ-ಮಲ್ಯಾಡಿ ದೇವಳ ಸ್ವಚ್ಛತಾ ಕಾರ್ಯ-karavalivani
ಕೋಟ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ ಟ್ರಸ್ಟ್ ಕುಂದಾಪುರ ತಾಲೂಕಿನ ತೆಕ್ಕಟ್ಟೆ ವಲಯದ ವತಿಯಿಂದ ಮಲ್ಯಾಡಿ ಶ್ರೀ ಮಹಾದೇವಿ ನಂದಿಕೇಶ್ವರ ಸಪರಿವಾರ ದೇವಸ್ಥಾನದ ಶ್ರದ್ಧಾ ಕೇಂದ್ರ ಸ್ವಚ್ಛತಾ ಕಾರ್ಯಕ್ರಮ ಭಾನುವಾರ ನಡೆಯಿತು.
ದೇವಸ್ಥಾನದ ಮುಕ್ತೇಶ್ವರರಾದ ರಘುರಾಮ್ ಶೆಟ್ಟಿ ಚಾಲನೆ ನೀಡಿದರು. ಮೇಲ್ವಿಚಾರಕರಾದ ರಾಧಿಕಾ, ಸೇವಾ ಪ್ರತಿನಿಧಿ ಸಾರಿಕಾ, ಕುಸುಮ, ಶಾಲಿನಿ, ಮೂಕಾಂಬಿಕಾ, ಜ್ಯೋತಿ ಎಲ್ಲಾ ಸಂಘದ ಸದಸ್ಯರು ಹಾಜರಿದ್ದರು. ಒಕ್ಕೂಟದ ಶ್ರೀನಿವಾಸ ಮಲ್ಯಾಡಿ ಸ್ವಾಗತಿಸಿ ಶಾಲಿನಿ ಮಲ್ಯಾಡಿ ವಂದಿಸಿದರು.
ವಾಟ್ಸಾಪ್ ಟ್ರಿಕ್ಸ್..


