Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

ಪಡುಕರೆ-ಖಾಸಗಿ ಮೀನು ಸಂಸ್ಕರಣಾ ಘಟಕದಲ್ಲಿ ಅಕ್ರವಾಗಿ ಮೀನು ಕಟ್ಟಿಂಗ್ ಕಾರ್ಯ - ಸ್ಥಳೀಯರ ವಿರೋಧ -karavalivani

 


ಕೋಟ: ಇಲ್ಲಿನ ಕೋಟತಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯ ಪಡುಕರೆ ಸರ್ಕಲ್ ಬಳಿ ಖಾಸಗಿ ಮೀನು ಸಂಸ್ಕರಣಾ ಘಟಕದಲ್ಲಿ ಅಕ್ರಮವಾಗಿ ಮೀನು ಕಟ್ಟಿಂಗ್ ಘಟಕ ಆರಂಭಿಸುವುದರ ವಿರುದ್ಧ ಸ್ಥಳೀಯರು ಪ್ರತಿಭಟನೆ ನಡೆದ ಘಟನೆ ಮಂಗಳವಾರ ನಡೆದಿದೆ.(https://www.karavalivani.com/)

ಕಳೆದ ಎರಡು ಮೂರುದಿನಗಳಿಂದ ಪಂಚಾಯತ್ ಲೈಸೆನ್ಸ್ ಪಡೆಯದೆ ಅಕ್ರಮವಾಗಿ ಮೀನು ಕಟ್ಟಿಂಗ್ ಸಂಸ್ಕರಣಾ ಘಟಕ ಆರಂಭಿಸುವುದನ್ನು ಗಮನಿಸಿದ ಸ್ಥಳೀಯರು ಶೈಕ್ಷಣಿಕ ಪ್ರದೇಶವಾಗಿ ಈ ಭಾಗ ಅಭಿವೃದ್ಧಿ ಗೊಳ್ಳುತ್ತಿದೆ.ಅಲ್ಲದೆ ಅತಿಯಾದ ವಾಸನೆ,ಮಲಿನಗೊಳ್ಳುತ್ತದೆ ಇದಕ್ಕೆ ಅವಕಾಶ ನೀಡುವುದಿಲ್ಲ.ಈ ಕೂಡಲೆ ಬಂದ್ ಮಾಡಿ ಇಲ್ಲವಾದಲ್ಲಿ ಧರಣಿ ಕೂರುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.

ಸ್ಥಳೀಯರ ಮನವೊಲಿಕೆ ಯತ್ನ


 ಕಟ್ಟಿಂಗ್ ಕಾರ್ಖಾನೆ ಮುಖ್ಯಸ್ಥ ಕೇಶವ ಕುಂದರ್ ಮಧ್ಯಪ್ರವೇಶಿಸಿ ಎರಡು ತಿಂಗಳು ಮಾತ್ರ ಇಲ್ಲಿ ಕಾರ್ಯರ್ನಿಹಿಸುತ್ತೇವೆ ನಂತರ ಬೇರೆಡೆ ಸ್ಥಳಾಂತರಿಸುತ್ತೇವೆ ಪ್ರತಿಭಟನೆ ಕೈಬಿಡಿ ಎಂದು ಸ್ಥಳೀಯರಲ್ಲಿ ಮನವಿ ಮಾಡಿದರು.ಇದಕ್ಕೂ ಜಗ್ಗದ ಸ್ಥಳೀಯರು ಪ್ರಸ್ತುತ ಇಲ್ಲಿರುವ ಕಾರ್ಖಾನೆಗಳೆ ಸಾಕು ಮತ್ತೆ ಹೊಸದಾಗಿ ಅವಕಾಶ ಕಲ್ಪಿಸಲಾರೆವು ಪಂಚಾಯತ್ ಲೈಸನ್ಸ್ ಪಡೆಯದೆ ಕಾರ್ಯನಿರ್ವಹಿಸುತ್ತಿರುವು ಎಷ್ಟು ಸೂಕ್ತ ಎಂದು ಪ್ರಶ್ನಿಸಿದರು.ಈ ವೇಳೆ ಕೇಶವ ಕುಂದರ್ ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆದ ಗದ್ದಲ ಏರ್ಪಟ್ಟಿತು.

ಹಂಗಾರಕಟ್ಟೆ ಯಶಸ್ವಿನಿ ಮೀನು ಸಂಸ್ಕರಣಾ ಕೇಂದ್ರ

ಹoಗಾರಕಟ್ಟೆ ಮೀನು ಸಂಸ್ಕರಣಾ ಘಟಕಕ್ಕೆ ಸಂಬoಧಿಸಿದ್ದು ಎನ್ನಲಾದ ಖಾರ್ಕಾನೆಯಾಗಿದ್ದು ಏಕಾಏಕಿ ಕೋಟ ಪಡುಕರೆ ವ್ಯಾಪ್ತಿಯ ಸ್ಥಳಾಂತರಗೊoಡು ವ್ಯವಹರಿಸಲು ಆರಂಭಿಸಿದ ಮಾಹಿತಿ ದೊರೆತ ಹಿನ್ನಲ್ಲೆಯಲ್ಲಿ ಸ್ಥಳೀಯರು ಆಕ್ರೋಶ ಹೊರಹಾಕಿದರಲ್ಲದೆ ಮೊದಲಿನಿಂದ ವ್ಯವಹರಿಸಿಕೊಂಡ ಕೇಂದ್ರದ ಬಗ್ಗೆ ತಗಾದೆ ನಮ್ಮದಲ್ಲ ಪರ್ಯಾಯವಾಗಿ ಮೀನು ಕಟ್ಟಿಂಗ್ ಕೇಂದ್ರದಿAದ ಇಲ್ಲಿ ಸಮಸ್ಯೆ ಸೃಷ್ಠಿಯಾಗಲಿದೆ.ಇದೊಂದು ಸರ್ಕಲ್ ಪ್ರದೇಶ,ಶಾಲಾಕಾಲೇಜುಗಳಿವೆ ಅಲ್ಲದೆ ಇದರ ನೀರು ರಸ್ತೆಯನ್ನು ಮಲಿನಗೊಳಿಸುತ್ತದೆ ಈ ಎಲ್ಲಾ ದೃಷ್ಠಿ ಇಟ್ಟುಕೊಂಡು ಹೋರಾಟ ನಡೆಸುತ್ತಿದ್ದೇವೆ ಯಾವುದೇ ಕಾರಣಕ್ಕೂ ಇಲ್ಲಿ ಬೇರೂರಲು ಅವಕಾಶ ನೀಡಲಾರೆವು ಎಂದು ಸ್ಥಳೀಯರು ವ್ಯಕ್ತಪಡಿಸಿದರು. ಈ ಹಿನ್ನಲ್ಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಕೋಟತಟ್ಟುಪಂಚಾಯತ್ ಅಧ್ಯಕ್ಷೆ ಅಶ್ವಿನಿದಿನೇಶ್ ಹಾಗೂ ಪಿ.ಡಿಓ ಜಯರಾಮ ಶೆಟ್ಟಿ,ಸದಸ್ಯೆ ವಿದ್ಯಾ ಸಾಲಿಯಾನ್

ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ ಖಾಸಗಿ ಸಂಸ್ಕರಣಾ ಘಟಕದ ಮುಖ್ಯಸ್ಥರನ್ನು ಸಮ್ಮುಖದಲ್ಲಿ ಕಾನೂನು ಬಾಹಿರವಾಗಿ ಮೀನು ಕಟ್ಟಿಂಗ್ ಕಾರ್ಯ ಆರಂಭಿಸಿದನ್ನು ಈ ಕೂಡಲೆ ಬಂದ್ ಮಾಡಿ ಎಂದು ಸೂಚಿದರು.

ಕಾರ್ಖಾನೆ ಮುಖ್ಯಸ್ಥರು ಈ ವಿಚಾರವನ್ನು ಗಂಭೀರವಾಗಿ ಪರಿಗಣಸಿ ಇನ್ನು ಮುಂದೆ ಕಟ್ಟಿಂಗ್ ಕಾರ್ಯಕ್ಕೆ ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟನಾಕಾರರನ್ನು ಅಸಮಾಧಾನ ಪಡಿಸಿದರು.




ಮೊಟ್ಟೆ ಸಸ್ಯಾಹಾರಿಯೇ? ಅಥವಾ ಮಾಂಸಾಹಾರಿಯೇ ಗೊತ್ತಿಲ್ಲದಿದ್ದರೆ ಈ ನ್ಯೂಸ್ ಅನ್ನು ಓದಿ 10 seconds ಕಾಯಿರಿ.





Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close