Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

ಕಾರ್ಕಡ- ಪರಿಸರ ಕಾಳಜಿ ವಹಿಸಿದರೆ ಮುಂದಿದೆ ಪ್ರತಿಫಲ- ಮುರುಳಿಧರ ನಾಯರಿ ಕಾರ್ಕಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ವನಮಹೋತ್ಸವ-(today news karavalivani)



ಕೋಟ: ಪ್ರತಿಯೊರ್ವರಲ್ಲೂ ಪರಿಸರ ಕಾಳಜಿ ಇದ್ದರೆ ಮುಂದಿನ ತಲೆಮಾರಿಗೆ ಪ್ರತಿಫಲ ಖಂಡಿತಾ ಲಭಿಸುತ್ತದೆ ಎಂದು ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಇದರ ನಿಕಟಪೂರ್ವಾಧ್ಯಕ್ಷ ಮುರುಳಿಧರ ನಾಯರಿ ಹೇಳಿದರು.
(Karavalivani Vani today news)

ಕಾರ್ಕಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಸಾಲಿಗ್ರಾಮದ ಮಹಾಲಸಾ ಎಂಟರ್‌ಪ್ರೆöÊಸಸ್ ವತಿಯಿಂದ ಹಮ್ಮಿಕೊಳ್ಳಲಾದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ ಪರಿಸರ ಕಾಳಜಿಯ ಕುರಿತು 50ವರ್ಷ ಹಿಂದೆಯೇ ಸರಕಾರ ಜನಸಾಮಾನ್ಯರನ್ನು ಜಾಗೃತಗೊಳಿಸಿತ್ತು ಆದರೆ ಅರ್ಥೈಸಿಕೊಳ್ಳದ ಜನರು ಕಾಡು ಕಡಿದು ನಾಡು ಮಾಡುವ ತವಕದಲ್ಲೆ ತಲ್ಲಿನರಾಗಿದ್ದಾರೆ, ಅಲ್ಲದೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಾಕಷ್ಟು ಮರಗಳನ್ನು ತೆರವುಗೊಳಿಸಲಾಗಿದೆ ಈ ಹಿನ್ನಲ್ಲೆಯಲ್ಲಿ ಶಾಲಾ ಮಕ್ಕಳಿಗೆ ಪರಿಸರ ಜಾಗೃತಿ ಮೂಲಕ ಗಿಡಗಳನ್ನು ಬೆಳೆಸುವ ಉದ್ಯಮಿಗಳ ಕಾರ್ಯ ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.

ಮಹಾಲಸಾ ಎಂಟರ್ಪ್ರೈಸಸ್ ಸಾಲಿಗ್ರಾಮ ಇದರ ಮಾಲಿಕ ನಿತ್ಯಾನಂದ ಶ್ಯಾನುಭಾಗ್ ಗಿಡ ವಿತರಿಸಿ ಪರಿಸರ ಸಂದೇಶವನ್ನು ವಿದ್ಯಾರ್ಥಿಗಳಿಗೆ ನೀಡಿದರು.

ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಅರುಣ್ ಅಡಿಗ ಅಧ್ಯಕ್ಷತೆ ವಹಿಸಿದ್ದರು.

ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಅಧಿಕಾರಿ ಮನೋಹರ್ ಭಟ್,ಎಸಿಸಿ ಲಿ.ಉಡುಪಿ ಇದರ ಗಣೇಶ್ ಶೆಣೈ,ಉದ್ಯಮಿ ಕೇಶವ ಶ್ಯಾನುಭಾಗ್,ರಾಮಚಂದ್ರ ಶ್ಯಾನುಭಾಗ್,ಅವಿನಾಶ್ ಶ್ಯಾನುಭಾಗ್, ನಿವೇದಿತಾ ಎನ್ ಶ್ಯಾನುಭಾಗ್, ಶಿಕ್ಷಕ ವೃಂದ ಮತ್ತಿತರರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಶಾಲಾ ಮುಖ್ಯ ಶಿಕ್ಷಕಿ ಲಲಿತಾ ಸ್ವಾಗತಿಸಿ ನಿರೂಪಿಸಿ ವಂದಿಸಿದರು.

ಕಾರ್ಕಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಸಾಲಿಗ್ರಾಮದ ಮಹಾಲಸಾ ಎಂಟರ್‌ಪ್ರೆöÊಸಸ್ ವತಿಯಿಂದ ಹಮ್ಮಿಕೊಳ್ಳಲಾದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮಹಾಲಸಾ ಎಂಟರ್‌ಪ್ರೆöÊಸಸ್ ಸಾಲಿಗ್ರಾಮ ಇದರ ಮಾಲಿಕ ನಿತ್ಯಾನಂದ ಶ್ಯಾನುಭಾಗ್ ಗಿಡ ವಿತರಿಸಿ ಪರಿಸರ ಸಂದೇಶವನ್ನು ವಿದ್ಯಾರ್ಥಿಗಳಿಗೆ ನೀಡಿದರು. ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಅಧಿಕಾರಿ ಮನೋಹರ್ ಭಟ್,ಎಸಿಸಿ ಲಿ.ಉಡುಪಿ ಇದರ ಗಣೇಶ್ ಶೆಣೈ,ಉದ್ಯಮಿ ಕೇಶವ ಶ್ಯಾನುಭಾಗ್ ಮತ್ತಿತರರು ಉಪಸ್ಥಿತರಿದ್ದರು.

Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close