ಕೋಟ ಮೂರಕೈ ಸಮೀಪ ಉಪ್ಲಾಡಿ ಸೇತುವೆ ವೀಕ್ಷಣೆ-today news karavalivani
ಕೋಟ: ಇಲ್ಲಿನ ಸಾಲಿಗ್ರಾಮಪಟ್ಟಣ ಪಂಚಾಯತ್(karavalivani) ವ್ಯಾಪ್ತಿಯ ಕೋಟ ಮೂರಕೈ ಸಮೀಪ ನೆರೆ ಪೀಡಿತ ಉಪ್ಲಾಡಿ ಸೇತುವೆಯನ್ನು ಉಡುಪಿ ಜಿಲ್ಲಾಧಿಕಾರಿ ಕೂರ್ಮ ಎಂ ರಾವ್(Udupi DC) ವೀಕ್ಷಿಸಿದರಲ್ಲದೆ ಆ ಭಾಗಗಳನೆರೆ ಪೀಡಿತ ಪ್ರದೇಶಗಳಿಗೂ ಭೇಟಿ ಇತ್ತರು.
ಪ.ಪಂ ಸದಸ್ಯ ಶ್ಯಾಮಸುಂದರ ನಾಯರಿ ಭೇಟಿ
ಇದೇ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಸಾಲಿಗ್ರಾಮ ಪ.ಪಂ ಸದಸ್ಯ ಶ್ಯಾಮಸುಂದರ ನಾಯರಿ ಮಾತನಾಡಿ ಕುಂದಾಪುರ ತಾಲೂಕಿನ ಕುಂಭಾಶಿಯಿoದ ಸಾಲಿಗ್ರಾಮ ಪ.ಪಂ ವ್ಯಾಪ್ತಿಯ ಚಿತ್ರಪಾಡಿಯವರಗೆ ನೆರೆ ಪೀಡಿತ ಪ್ರದೇಶವಾಗಿ ರೂಪುಗೊಂಡಿದೆ ಇದಕ್ಕೆ ಕಾರಣವಾದ ಉಪ್ಲಾಡಿ,ಗಿಳಿಯಾರು,ಕೊಯ್ಕೂರು ಸೇತುವೆಯ ಅಗಲಕಿರಿದಾದ ಅವ್ಯವಸ್ಥೆಯನ್ನು ಮನಗಾಣಿಸಿದರಲ್ಲದೆ ಈ ಸಂಬoಧ ಸೇತುವೆ ಎತ್ತರಗೊಳಿಸಿ,ಅಗಲಿಕರಣಗೊಳಿಸಿ, ಹೊಳೆ ಭಾಗವನ್ನಯ ಹೂಳೆತ್ತಲು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.
ಡಿ ಸಿ ಭರವಸೆ(Udupi DC)
ಜಿಲ್ಲಾಧಿಕಾರಿಗಳು ಈ ಕುರಿತು ಮಾತನಾಡಿ ಇಲ್ಲಿ ನಡೆದ ಪ್ರತಿಭಟನೆ ಹಾಗೂ ಇಲ್ಲಿನ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದಿದ್ದೇನೆ ಈ ಕುರಿತು ಸರಕಾರಕ್ಕೆ ವರದಿ ಕಳುಹಿಸಲಾಗಿದೆ ಮುಂದಿನ ಬೇಸಿಗೆಯಲ್ಲಿ ಈ ಕಾಮಗಾರಿಯ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪಟ್ಟಣಪಂಚಾಯತ್ ಮುಖ್ಯಾಧಿಕಾರಿ ಶಿವ ನಾಯ್ಕ್,ಪಟ್ಟಣಪಂಚಾಯತ್ ಆರೋಗ್ಯ ನೀರಿಕ್ಷಕಿ ಮಮತಾ, ಸ್ಥಳೀಯ ನೆರೆಪೀಡಿತರು ಉಪಸ್ಥಿತರಿದ್ದರು.


