ನಿರ್ಮಾಲಾ ಪಿಯು ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ-karavalivani
ಸ್ವಾಮಿ ವಿವೇಕಾನಂದರ ಜಯಂತಿ ,
ರಾಷ್ಟ್ರೀಯ ಯುವ ದಿನಾಚರಣೆಯನ್ನು ಆಚರಿಸಲಾಯಿತು.ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಪ್ರಥಮ ಪಿಯು ಸಿಂಚನ ಇವರು ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಯ ಬಗ್ಗೆ ಭಾಷಣ ಮಾಡಿದರು. ನಂತರ ಪ್ರಥಮ ಮತ್ತು ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಇಂದಿನ ಯುವ ಜನತೆ ಸಂಸ್ಕಾರಸಂಸ್ಕೃತಿಯನ್ನು ಪಾಲನೆ ಮಾಡುತ್ತಾರೋ ಇಲ್ಲವೋ ಎಂಬ ವಿಷಯ ದ ಚರ್ಚಾ ಸ್ಪರ್ಧೆ ಏರ್ಪಡಿಸಲಾಯಿತು. ಪ್ರಥಮ ಪಿಯು ವಿದ್ಯಾರ್ಥಿಗಳಾದ ಸಿಂಚನ, ನಿಶ್ಮಿತಾ, ಅನನ್ಯ, ಸಹನಾ, ಮೋನಿಕಾ ಅಕ್ಷತಾ, ಪ್ರಜ್ವಲ್, ವಿಘ್ನೇಶ, ರಿತೇಶ್, ದ್ವಿತೀಯ ಪಿಯು ವಿದ್ಯಾರ್ಥಿಗಳಾದ ರಶ್ಮಿ ಕುಂದರ್, ಜಾಯಿಸ್ಲಿನ್,ನಿರೀಕ್ಷಾ, ವೈಷ್ಣವಿ, ಐಶ್ವರ್ಯ, ಹರ್ಷಿತಾ, ಸ್ನೇಹ, ಭೂಷಣ,ರಕ್ಷಣ್ ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಿದರು.
