ಸರಕಾರದ ವಿಕೇಂಡ್ ಕರ್ಫ್ಯೂಗೆ ಜನಸಾಮಾನ್ಯರ ನಿರಾಸಕ್ತಿ, ಆಕ್ರೋಶ-karavalivani
ಕೋಟ: ಒಮಿಕ್ರಾನ್ ಹಾಗೂ ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯ ಸರಕಾರ ಘೋಷಿಸಿದ ವೀಕೆಂಡ್ ಕರ್ಫ್ಯೂ ಗೆ ಜನಸಾಮಾನ್ಯರು ನಿರಾಸಕ್ತಿ ತೊರಿದ್ದು ಸರಕಾರದ ಈ ಕ್ರಮದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಶನಿವಾರ ಹಾಗೂ ಭಾನುವಾರದ ಕರ್ಫ್ಯೂ ಹಿನ್ನಲ್ಲೆಯನ್ನು ಲೆಕ್ಕಿಸದೆ ಕೋಟ ,ಸಾಲಿಗ್ರಾಮ,ಸಾಸ್ತಾನ,ತೆಕ್ಕಟ್ಟೆ ಭಾಗಗಳ ಜನಸಾಮಾನ್ಯರು ಹಾಗೂ ವ್ಯವಹಾರಿಕಾ ಕೇಂದ್ರಗಳು ಎಂದಿನoತೆ ತಮ್ಮ ಕಾರ್ಯಚಟುವಟಿಕೆಯನ್ನು ನಿರ್ವಹಿಸುತ್ತಿದ್ದು ಕಂಡುಬoತು.ಈ ಭಾಗಗಳ ಕೆಲವೇ ಕಲವು ವ್ಯವಹಾರಿಕಕೇಂದ್ರಗಳು ಬಂದ್ ಗೊಳಿಸಿದ್ದಲ್ಲದೆ ಇನ್ನುಳಿದಂತೆ ಸಾಕಷ್ಟು ಅಂಗಡಿ ಮುಂಗಟ್ಟುಗಳು ತೆರದು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ನಿರತರಾದರು.
ಇಲ್ಲಿನ ಕೋಟ,ಸಾಲಿಗ್ರಾಮ ,ಸಾಸ್ತಾನ ,ಸಾಯಿಬ್ರಕಟ್ಟೆ ಭಾಗಗಳಿಗೆ ಬ್ರಹ್ಮಾವರ ತಹಶಿಲ್ದಾರ್ ರಾಜಶೇಖರಮೂರ್ತಿ ಭೇಟಿ ನೀಡಿ ಸರಕಾರ ನಿಗದಿಪಡಿಸಿದ ಕೋವಿಡ್ ಮಾರ್ಗಸೂಚಿ ವಿಕೇಂಡ್ ಕರ್ಫ್ಯೂಗೆ ಸಹಕರಿಸುವಂತೆ ವ್ಯವಹಾರಿಕಾ ಕೇಂದ್ರಗಳಲ್ಲಿಮನವಿ ಮಾಡಿದರು.ಈ ಹಿನ್ನಲ್ಲೆಯಲ್ಲಿ ಸ್ಥಳಕ್ಕೆ ಕೋಟ ಆರಕ್ಷಕರು ಸರಕಾರದ ವಿಕೇಂಡ್ ಕರ್ಫ್ಯೂ ಮಾರ್ಗಸೂಚಿಗೆ ಸಹಕರಿಸಿ ಎಂದು ತೆರೆದಿದ್ದ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದರು.
ವ್ಯವಹಾರಸ್ಥರ ಆಕ್ರೋಶ
ಈ ನಡುವೆ ಕಳೆದೆರಡು ವರ್ಷಗಳಿಂದ ಎದುರಾಗುತ್ತಿರುವ ಲಾಕ್ ಡೌನ್ ಗಳಿಂದ ಜನಜೀವನ ದುಸ್ತರವಾಗಿದೆ.ವ್ಯವಹಾರಿಕಾ ಕೇಂದ್ರಗಳು ಕುಂಠಿತಗೊoಡಿದೆ.ಹೀಗಿರುವಾಗ ಇದೀಗ ಸ್ವಲ್ಪ ಮಟ್ಟಿಗೆ ಚೇತರಿಸುತ್ತಿದ್ದ ಸನ್ನಿವೇಶದಲ್ಲೆ ಸರಕಾರ ಪುನಃ ವಿಕೇಂಡ್ ಕರ್ಫ್ಯೂ ಜಾರಿ ತಂದಿದೆ ಇದರಿಂದ ಭಾರಿ ಸಮಸ್ಯೆಯಾಗಿ ಪರಿಣಮಿಸಿದೆ ಇದೇ ರೀತಿ ಮುಂದುವರಿದರೆ ತಾವುಗಳು ಜೀವನ ನಡೆಸುವುದಲ್ಲ ಬದಲಾಗಿ ಜೀವ ತೆಗೆದುಕೊಳ್ಳುವ ಸ್ಥಿತಿ ಎದುರಾಗುತ್ತದೆ ಎಂದು ಮಾಧ್ಯಮದ ಮುಂದೆ ವ್ಯವಹಾರಸ್ಥರು ತಮ್ಮ ಅಳಲನ್ನು ತೋಡಿಕೊಂಡು ಆಕ್ರೋಶ ಹೊರಹಾಕಿದರು.
