Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

ಜೆಸಿಐ ಕೋಟ ಬಿಗ್ರೇಡಿಯರ್‌ನ ಪದಪ್ರದಾನ 2022--karavalivani,


 


ಕೋಟ:  ಜೆಸಿಐ ವಲಯ 15ರ ಘಟಕವಾದ ಜೆಸಿಐ ಕೋಟ ಬಿಗ್ರೇಡಿಯರ್‌ನ 2022ರ ಪದಪ್ರದಾನ ಸಮಾರಂಭವು ಆನೆಗುಡ್ಡೆ ಶ್ರೀ ವಿನಾಯಕ ಸಭಾಗೃಹದಲ್ಲಿ ನಡೆಯಿತು. 2021ರ ಅಧ್ಯಕ್ಷ ಜೇಸಿ ಅಭಿಷೇಕ್ ನೂತನ ಅಧ್ಯಕ್ಷರಾದ  ರೇಖಾ ಚಂದನ್‌ರವರಿಗೆ ಆಧಿಕಾರವನ್ನು ಹಸ್ತಾಂತರಿಸಿದರು.ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಜೆಸಿಐನ ಪೂರ್ವ ರಾಷ್ಟ್ರೀಯ ಕಾನೂನು ಸಲಹೆಗಾರರಾದ   ಶ್ರೀಧರ್ ಪಿ.ಎಸ್,  ವಲಯಾಧ್ಯಕ್ಷರಾದ ಉದಯ್ ಕ್ರಾಸ್ತಾ , ಎಫ್.ಎಸ್.ಎಲ್ ನ ಆಧಿಕಾರಿಗಳಾದ ದಿನೇಶ್ ಸಾರಂಗ್, ಜೆಸಿಐ ವಲಯ ಉಪಾಧ್ಯಕ್ಷ  ವಿಜಯ ನರಸಿಂಹ ಐತಾಳ್, ಶ್ರೀ ವಿನಾಯಕ ಸಭಾಗೃಹದ ಮಾಲಕ ರವಿರಾಜ್ ಉಪಾದ್ಯಾಯ, ನೂತನ ಅಧ್ಯಕ್ಷೆ  ರೇಖಾ ಚಂದನ್, ನೂತನ ಕಾರ್ಯದರ್ಶಿ  ಶ್ರೀಶಾ ಆಚಾರ್ ಹಾಗೂ ಸ್ಥಾಪಕಾಧ್ಯಕ್ಷ  ಸುರೇಶ್ ಗಿಳಿಯಾರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಜೆಸಿಐನ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷರಾದ ಸಂದೀಪ್ ಕುಮಾರ್, ಪೂರ್ವ ವಲಯ ಉಪಾಧ್ಯಕ್ಷೆ ಅಕ್ಷತಾ ಗಿರೀಶ್, ಪೂರ್ವ ವಲಯಾಧಿಕಾರಿ ಕೇಶವ ಆಚಾರ್ ಕೋಟ, ಜೆಸಿಐ ಕುಂದಾಪುರದ ಅಧ್ಯಕ್ಷೆ ನಾಗರತ್ನ ಹೇರ್ಳೆ, ಜೆಸಿಐ ಕುಂದಾಪುರ ಸಿಟಿ ಅಧ್ಯಕ್ಷ ಅಭಿಲಾಷ್, ಚಂದನ್ ಗೌಡ, ಸದಸ್ಯರಾದ ಅಶ್ವಿನಿ ಪ್ರಭು, ಸುಶ್ಮೀತಾ, ವಿಜಯ ಆಚಾರ್, ಭಾರ್ಗವ, ಸದಾಶಿವ ಬನ್ನಾಡಿ ಹಾಗೂ ಇತರ ಘಟಕದ ಸದಸ್ಯರು ಉಪಸ್ಥಿತರಿದ್ದರು. 

Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close