Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

ಪತ್ರಿಕಾ ಪ್ರಕಟಣೆ**ಚಿತ್ತಾರಿ ಆಗ್ರಿಕೇರ್‌ ನಿಂದ ಸಾವಯವ ಕಚ್ಚಾವಸ್ತುಗಳನ್ನ ಬಳಸಿಕೊಂಡು ತಯಾರಿಸಲಾದ ರಸಗೊಬ್ಬರಗಳ ಬಿಡುಗಡೆ karavalivani

ರಾಜ್ಯದಲ್ಲೇ ಮೊದಲ ಬಾರಿಗೆ ನೈಸರ್ಗಿಕ ವಸ್ತುಗಳನ್ನು ಬಳಸಿಕೊಂಡು ತಯಾರಿಸಲಾಗುತ್ತಿರುವ ರಸಗೊಬ್ಬರಗಳು 
-ಆಮದು ರಾಸಾಯನಿಕಗಳ ಕೊರತೆಯನ್ನ ತಪ್ಪಿಸುವ ನಿಟ್ಟಿನಲ್ಲಿ “ಮೇಕ್‌ ಇನ್‌ ಇಂಡಿಯಾ” ಕಾನ್ಸೆಪ್ಟ್‌ನಲ್ಲಿ ದೇಶದಲ್ಲೇ ಸಿಗುವ ಕಚ್ಚಾವಸ್ತುಗಳಿಂದ ನೂತನ ಉತ್ಪನ್ನಗಳ ತಯಾರಿಕೆ
-ಮ್ಯೊಲ್ಯಾಸಿಸ್‌ ನಿಂದ ತಯಾರಿಸಲಾದ ಪೊಟ್ಯಾಶ್‌, ಪಾಸ್ಫೇಟ್‌ ರಿಚ್‌ ಆಗ್ಯಾರ್ನಿಕ್‌ ಮನ್ಯೂರ್‌, ನೀಮ್‌ ನಂತಹ ಪದಾರ್ಧಗಳ ಬಳಕೆ

*ಬೆಂಗಳೂರು ಡಿಸೆಂಬರ್‌ 2*: ನೈಸರ್ಗಿಕ ಹಾಗೂ ಸಾವಯವ ಕಚ್ಚಾವಸ್ತುಗಳನ್ನು ಬಳಸಿಕೊಂಡು ರಾಜ್ಯದಲ್ಲೇ ಪ್ರಪ್ರಥಮವಾಗಿ ಉತ್ಪಾದಿಸಲಾಗುತ್ತಿರುವ ಚಿತ್ತಾರಿ ಅಗ್ರಿಕೇರ್‌ ನ ನ್ಯೂಟ್ರಿಮೇಂಟ್‌ ರಸಗೊಬ್ಬರಗಳನ್ನು ಇಂದು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು. 

*ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿ ಮಾತನಾಡಿದ ಚಿತ್ತಾರಿ ಅಗ್ರಿಕೇರ್‌ ಹಾಗೂ ಬಯಾರ್ಡ್‌ ಅಗ್ರೋಸೈನ್ಸ್‌ನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಅಧ್ಯಕ್ಷರಾದ ಪಿ. ವಿಜಯಕುಮಾರ್‌ ಶೆಟ್ಟಿ*, ಕರೋನಾ ಸಾಂಕ್ರಾಮಿಕದ ಕಾರಣದಿಂದ ವಿಶ್ವದಾದ್ಯಂತ ರಸಗೊಬ್ಬರಗಳ ಉತ್ಪಾದನೆಗೆ ಬಳಸಲಾಗುವ ರಾಸಾಯನಿಕಗಳ ಕೊರತೆಯಿದೆ. ಅದರಲ್ಲೂ ಪೆಟ್ರೋಯಲಿಂ ಉತ್ಪನ್ನಗಳ ಕೊರತೆಯೂ ಇದೆ. ಇದರಿಂದಾಗಿ ದೇಶದಲ್ಲಿ ರಸಗೊಬ್ಬರದ ಉತ್ಪಾದನೆ ಕಡಿಮೆಯಾಗಿದ್ದು, ರಸಗೊಬ್ಬರಗಳ ಕೊರತೆಯಿಂದ ರೈತರಿಗೆ ತೊಂದರೆ ಆಗುತ್ತಿದೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ನೈಸರ್ಗಿಕವಾಗಿ ದೊರೆಯುವಂತಹ ಮೊಲ್ಯಾಸಿಸ್‌ ನಿಂದ ತಯಾರಿಸಲಾದ ಪೊಟ್ಯಾಶ್‌, ಪಾಸ್ಫೇಟ್‌ ರಿಚ್‌ ಆಗ್ಯಾರ್ನಿಕ್‌ ಮನ್ಯೂರ್‌, ನೀಮ್‌ ಹಾಗೂ ಸೀವೀಡ್‌ ಮತ್ತು ಹ್ಯೂಮಿಕ್‌ ಬಾಲ್‌ಗಳನ್ನು ಬಳಸಿಕೊಂಡು ರಸಗೊಬ್ಬರಗಳನ್ನು ತಯಾರಿಸಿದ್ದೇವೆ. ಇಂತಹ ಉತ್ಪನ್ನಗಳನ್ನು ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ತಯಾರಿಸುತ್ತಿರುವ ಸಂಸ್ಥೆ ಎನ್ನುವ ಹೆಗ್ಗಳಿಕೆ ನಮ್ಮದು. 


ನಿರ್ದೇಶಕರಾದ ಗಣೇಶ್‌ ಹೆಗ್ಡೆ ಮಾತನಾಡಿ*, ದೇಶದ ಹಾಗೂ ರಾಜ್ಯದ ರೈತರಿಗೆ ಸಾವಯವ ರಸಗೊಬ್ಬರಗಳನ್ನು ನೀಡಬೇಕು ಎನ್ನುವ ಉದ್ದೇಶದಿಂದ ನಮ್ಮ ಸಂಸ್ಥೆಯ ವತಿಯಿಂದ ನಾನ್‌ ಎಡಿಬಲ್‌ ಡಿ-ಆಯಿಲ್ಡ್‌ ನೀಮ್‌ ಕೇಕ್‌ ಆಗಿರುವ ನಂದಿ, ಸೀ ವೀಡ್‌ ಬಳಸಿಕೊಂಡು ತಯಾರಿಸಲಾಗಿರುವ ಸಮುದ್ರ, ಮ್ಯೋಲ್ಯಾಸಿಸ್‌ ನಿಂದ ತಯಾರಿಸಲಾಗಿರುವ ಪೊಟ್ಯಾಶ್‌ ಹೊಂದಿರುವ ವಜ್ರ, ಫಾಸ್ಪೇಟ್‌ ರಿಚ್‌ ಆಗ್ಯಾನಿಕ್‌ ಮನ್ಯೂರ್‌ ಹೊಂದಿರುವ ಭೂಮಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದೇವೆ. ರೈತರುಗಳು ರಾಸಾಯನಿಕ ಬಳಸದೇ ಇರುವ ಸಾವಯವ ರಸಗೊಬ್ಬರಗಳನ್ನು ಬಳಸಿರುವ ರಸಗೊಬ್ಬರಗಳನ್ನು ಬಳಸಬೇಕು ಎಂದರು. 

ಕಾರ್ಯಕ್ರಮದಲ್ಲಿ, ರಾಯಚೂರಿನ ಸಾಗರ್‌ ಎಂಟರ್‌ಪ್ರೈಸಸ್‌ನ ಮಾಲೀಕರಾದ ಶ್ರೀನಿವಾಸ್‌, ಬಾಗೋಡಿ ಟ್ರೇಡಿಂಗ್‌ ನ ಮಾಲೀಕರಾದ ದೇವರಾಜ್‌, ರೀಜನಲ್‌ ಮ್ಯಾನೇಜರ್‌ ರಾಮಯ್ಯ ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.
Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close