Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

ಬಾರ್ಕೂರು ಶ್ರೀ ವೇಣುಗೋಪಾಲಕೃಷ್ಣ ದೀಪೋತ್ಸವ -karavalivani


ಕೋಟ, ನ. 26: ಬಾರ್ಕೂರು ಶ್ರೀ ವೇಣುಗೋಪಾಲಕೃಷ್ಣ ದೇಗುಲದಲ್ಲಿ  ನ. 27ರಂದು ಜರಗಿದ ವಾರ್ಷಿಕ ಕಾರ್ತಿಕ ದೀಪೋತ್ಸವ ಪ್ರಯುಕ್ತ ಸಭಾ ಕಾರ್ಯಕ್ರಮದಲ್ಲಿ  ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ವತಿಯಿಂದ ಸಾಧಕರಿಗೆ ಸಮ್ಮಾನ, ಗ್ರಾ.ಪಂ. ಸದಸ್ಯರಿಗೆ ಗೌರವಾರ್ಪಣೆ ಜರಗಿತು. 

    ಜಿಲ್ಲಾ ಗಾಣಿಗ ಸಮಾಜದ ಅಧ್ಯಕ್ಷ ವಾಸುದೇವ ಬೈಕಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದ ಸಂಘಟನೆಗೆ ಪ್ರತಿಯೊಬ್ಬರ ಒಗ್ಗೂಡುವಿಕೆ ಅಗತ್ಯ. ನಮ್ಮ ಸಮಾಜ ಎಲ್ಲಾ ಕ್ಷೇತ್ರಗಳಲ್ಲೂ ಬಲಗೊಳ್ಳುತ್ತಿದ್ದು ಮುಂದೆ ಸಂಘಟನೆ, ಸಮಾಜವನ್ನು ಇನ್ನೂ ಹೆಚ್ಚಿಗೆ ಬಲಪಡಿಸಲು ಎಲ್ಲರ ಸಹಕಾರ ಅಗತ್ಯ ಎಂದರು. 

 ಈ ಸಂದರ್ಭ ಹಿರಿಯ ಯಕ್ಷಗಾನ ಕಲಾವಿದ ಕೋಡಿ ಕೃಷ್ಣ ಗಾಣಿಗರಿಗೆ ಸುವರ್ಣ ಮಹೋತ್ಸವ ಯಕ್ಷನಿಧಿಯಿಂದ ಕೊಡಮಾಡುವ ದಿ| ಹಾರಾಡಿ ರಾಮ ಗಾಣಿಗ ಪ್ರಶಸ್ತಿ ನೀಡಿ ಗೌರವಿಸಲಾಯಿತು ಹಾಗೂ  ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಮಾಜಿ ಅಧ್ಯಕ್ಷರು, ಸಮಾಜ ಹಾಗೂ ದೇಗುಲದ ಅಭಿವೃದ್ಧಿಗೆ ಅವಿರತ ಶ್ರಮಿಸಿದ ಕೆ. ಗೋಪಾಲ್ ಮತ್ತು ಉಡುಪಿ ವಕೀಲರ ಸಂಘದ ಅಧ್ಯಕ್ಷ ಬಿ. ನಾಗರಾಜ್ ಗಾಣಿಗ ಮಾಲ್ತಾರು-ಬ್ರಹ್ಮಾವರ,  ಮಾನವ ಹಕ್ಕುಗಳ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ದಿನೇಶ್ ಗಾಣಿಗ ಕೋಟ ಅವರನ್ನು ಸಮ್ಮಾನಿಸಲಾಯಿತು ಹಾಗೂ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ  ಉಪ್ಪುಂದ ಶ್ರೀಧರ ಗಾಣಿಗ, ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶೇಖರ್ ಗಾಣಿಗ ಬೀಜನಮಕ್ಕಿ, ಸರಕಾರಿ ನೌಕರರ ಕ್ರೀಡಾಕೂಟದಲ್ಲಿ ರಾಷ್ಟç ಮಟ್ಟವನ್ನು ಪ್ರತಿನಿಧಿಸಿದ ಯಶೋಧ ರಾಘವೇಂದ್ರ ಗಾಣಿಗ  ಸಾೖಬ್ರಕಟ್ಟೆ, ಹಿರಿಯ ಸಮಾಜ ಸೇವಕ ಶ್ರೀನಿವಾಸ ರಾವ್ ಪ್ರಗತಿನಗರ ಅವರನ್ನು ಗೌರವಿಸಲಾಯಿತು. 

    ಸಮಾಜದಿಂದ ಉಡುಪಿ ಜಿಲ್ಲೆಯ ವಿವಿಧ ಗ್ರಾ.ಪಂ. ಸದಸ್ಯರಾಗಿ ಆಯ್ಕೆಯಾದ ನಾಗವೇಣಿ ಪಂಡರಿನಾಥ ಬಿರ್ತಿ, ರೇಖಾ ತೆಂಕನೆಡಿವೂರು,  ನಟರಾಜ್ ಗಾಣಿಗ ಮಾಬುಕಳ, ಗಣೇಶ್ ಗಾಣಿಗ ಬಾರ್ಕೂರು, ದಿವಾಕರ ಗಾಣಿಗ ಆವರ್ಸೆ, ನಾಗರಾಜ ಗಾಣಿಗ ಬಸ್ರೂರು, ರವಿ ಗಾಣಿಗ ಕೆಂಚನೂರು, ಉಷಾ ಗಾಣಿಗ ಶಿರೂರು, ಸುಮಿತ್ರ ಗಾಣಿಗ ಉಪ್ಪುಂದ,  ರಾಘವೇಂದ್ರ ಗಾಣಿಗ ಬವಳಾಡಿ, ಜಲಜಾಕ್ಷಿ ಗಾಣಿಗ ಹೆರೆಂಜಾಲು, ಸುಲೋಚನ ಗಾಣಿಗ ನಾವುಂದ, ಲೀಲಾವತಿ ಗಾಣಿಗ ಕನ್ಯಾಣ, ಹರೀಶ್ ಗಾಣಿಗ ಕುಂಭಾಶಿ, ಲೋಲಾಕ್ಷಿ ಗಾಣಿಗ ಗುಜ್ಜಾಡಿ, ಸೀತಾರಾಮ್ ಗಾಣಿಗ ಗುಜ್ಜಾಡಿ, ಮಹಾಲಕ್ಷ್ಮಿ ಗಾಣಿಗ ಉಪ್ಪುಂದ, ಜಯಲಕ್ಷ್ಮಿ ಗಾಣಿಗ ನಾರ್ಕಳಿ, ಸುಮತಿ ಗಾಣಿಗ ಯಡಮೊಗೆ ಅವರನ್ನು ಸಮ್ಮಾನಿಸಲಾಯಿತು. ಹಲವು ವರ್ಷಗಳಿಂದ ದೀಪೋತ್ಸವದ ಅನ್ನಸಂತರ್ಪಣೆ ಸೇವಾದಾರರಾದ ನೀಲಾವರ ಸಂಜೀವ ರಾವ್ ಅವರಿಗೆ ವಿಶೇಷ ಕೃತಜ್ಞತೆ ಸಲ್ಲಿಸಲಾಯಿತು. 

   ಬೆಂಗಳೂರು ಸೋಮಕ್ಷತ್ರಿಯ ಗಾಣಿಗ ಸಮಾಜದ ಗೌರವಾಧ್ಯಕ್ಷ ಬಿ.ಎಸ್. ಮಂಜುನಾಥ, ಕುಂದಾಪುರ ಗಾಣಿಗ ಸಂಘದ ಅಧ್ಯಕ್ಷ ಪ್ರಭಾಕರ್ ಕುಂಭಾಶಿ, ಉತ್ತರ ಕನ್ನಡ ಗಾಣಿಗ ಸಮಾಜದ ಅಧ್ಯಕ್ಷ ದಾಮೋದರ ಶೆಟ್ಟಿ, ಸಂಪರ್ಕಸುಧಾ ಪತ್ರಿಕೆಯ ಅಧ್ಯಕ್ಷ ಎಸ್.ಕೆ. ಪ್ರಾಣೇಶ್, ಎಜ್ಯುಕೇಶನ್ ಸೊಸೈಟಿ ಕಾರ್ಯದರ್ಶಿ ಗಣೇಶ್ ಜಿ. ಚೆಲ್ಲಿಮಕ್ಕಿ, ಬೆಂಗಳೂರು ವೇಣುಗೋಪಾಲಕೃಷ್ಣ  ಸೊಸೈಟಿ ಅಧ್ಯಕ್ಷ ಎಂ. ಗೋಪಾಲಕೃಷ್ಣ ಹಾಗೂ ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಉಪಾಧ್ಯಕ್ಷ ಉದಯ ಕುಮಾರ್, ಅನ್ನಪೂರ್ಣೇಶ್ವರೀ ಮಹಿಳಾ ಸಂಘದ ಅಧ್ಯಕ್ಷೆ ಜಯಂತಿ ವಾಸುದೇವ್ ಉಪಸ್ಥಿತರಿದ್ದರು. 

ಸಂಘಟನೆಯ ಖಜಾಂಚಿ ರಘುರಾಮ್ ಬೈಕಾಡಿ  ಸ್ವಾಗತಿಸಿ, ಕಾರ್ಯದರ್ಶಿ  ರಾಜೇಶ್ ಗಾಣಿಗ ಅಚ್ಲಾಡಿ ಕಾರ್ಯಕ್ರಮ ನಿರೂಪಿಸಿದರು. ಜತೆ ಕಾರ್ಯದರ್ಶಿ ರಾಮಕೃಷ್ಣ ಹಾರಾಡಿ, ಯೋಗೀಶ್ ಕೊಳಲಗಿರಿ ಸಾಧಕರನ್ನು ಪರಿಚಯಿಸಿದರು. ಉಪಾಧ್ಯಕ್ಷ ಸರ‍್ಯನಾರಾಯಣ ಗಾಣಿಗ ವಂದಿಸಿದರು.  




Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close