Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

ಸೇಕ್ರೆಡ್ ಹಾರ್ಟ್ ಚರ್ಚ್ ಕೊಳಲಗಿರಿಯಲ್ಲಿ ಕ್ರಿಸ್ಮಸ್ ಹಬ್ಬದ ಆಚರಣೆ

ಸೇಕ್ರೆಡ್ ಹಾರ್ಟ್ ಚರ್ಚ್ ಕೊಳಲಗಿರಿಯಲ್ಲಿ ಕ್ರಿಸ್ಮಸ್ ಹಬ್ಬದ ಆಚರಣೆ 


 ಹುಲಿ 

 

ಸೇಕ್ರೆಡ್ ಹಾರ್ಟ್ ಚರ್ಚ್ ಕೊಳಲಗಿರಿಯಲ್ಲಿ ಕ್ರಿಸ್ಮಸ್ ಹಬ್ಬದ ಆಚರಣೆಯನ್ನು ಸಡಗರದಿಂದ ಆಚರಿಸಲಾಯಿತು. ದಿವ್ಯ ಬಲಿಪೂಜೆಯ ಪ್ರಧಾನ ಯಾಜಕರಾಗಿ ಅತೀ ವೆಂದನಿಯ ಧರ್ಮಗುರುಗಳಾದ ಮನೋಹರ್ ಡಿ'ಸೋಜಾ ಪೆರಂಪಳ್ಳಿ


 

(ಪೆರಂಪಳ್ಳಿ ಚರ್ಚ್ ಕಾನ್ವೆಂಟ್ ಇದರ ಪ್ರಧಾನರು) ಹಾಗೂ ಚರ್ಚಿನ ಧರ್ಮಗುರು ವೆಂದನಿಯ ಧರ್ಮಗುರುಗಳಾದ ಜೋಸೆಫ್ ಮಾಚಾದೋ ಅವರು ನೆರವೇರಿಸಿದರು. ಕ್ರಿಸ್‌ಮಸ್‌ ಕೇವಲ ಕೇಕ್ ತಿನ್ನುವ ಅಥವಾ ಉಡುಗೊರೆ ಹಂಚುವ ಹಬ್ಬವಲ್ಲ. ಇದು ‘ಕ್ಷಮೆ’ ಮತ್ತು ’ತ್ಯಾಗ’ವನ್ನು ಕಲಿಸುವ ದಿನ. ಯೇಸುಕ್ರಿಸ್ತನು ಶತ್ರುಗಳನ್ನು ಪ್ರೀತಿಸಬೇಕು ಮತ್ತು ದೀನದಲಿತರಿಗೆ ಸಹಾಯ ಮಾಡಬೇಕು ಹಾಗೂ ಈ ದಿನದಂದು ಜನರು ತಮ್ಮ ಹಳೆಯ ವೈಷಮ್ಯಗಳನ್ನು ಮರೆತು 



ಪರಸ್ಪರ ಶುಭಾಶಯ ಕೋರಬೇಕು ಎಂದು ಬೋಧಿಸಿದರು. ಮಧ್ಯರಾತ್ರಿಯೇ ಚರ್ಚ್‌ನಲ್ಲಿ ವಿಶೇಷ ಪ್ರಾರ್ಥನೆಗಳು ನಡೆದಿದ್ದು, ‘ಗ್ಲೋರಿಯಾ’ ಗೀತೆಗಳ ಮೊಳಗಿನೊಂದಿಗೆ ಬಾಲ ಯೇಸುವನ್ನು ಬರಮಾಡಿಕೊಳ್ಳಲಾಯಿತು.. ಸಹಸ್ರಾರು ಭಕ್ತಾದಿಗಳು ಆಚರಣೆಯಲ್ಲಿ ಭಾಗಿದಾರರಾದರು. ಪೂಜೆಯ ಬಳಿಕ ಕಥೋಲಿಕ್ ಸಭಾ, ಐಸಿವೈಯಮ್ ಹಾಗೂ ವೈಸಿಯಸ್ ಇವರಿಂದ ಮನೋರಂಜನಾ ಕಾರ್ಯಕ್ರಮವನ್ನು ನೀಡಿದರು..



Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close