ಕೋಟ ಸಹಕಾರಿ ವ್ಯವಸಾಯಕ ಸಂಘಕ್ಕೆ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ-karavalivani
ಕೋಟ: ಕೋಟ ಸಹಕಾರಿ ವ್ಯವಸಾಯಕ ಸಂಘವು ಪ್ರಾರಂಭಗೊoಡು 64 ವರ್ಷಗಳ ಸಾರ್ಥಕ ಸೇವೆಯನ್ನು(karavalivani) ನೀಡಿ, 65ನೇ ವರ್ಷದಲ್ಲಿ ಯಶಪ್ರದವಾಗಿ ಮುನ್ನೆಡೆಯುತ್ತಿರುವ ಸಂದರ್ಭ ಸಂಘವು 172 ಕೋಟಿಗೂ ಮಿಕ್ಕಿ ಠೇವಣಾತಿ ಹೊಂದಿ, 127 ಕೋಟಿಗೂ ಮಿಕ್ಕಿ ಸಾಲ ನೀಡಿದ್ದು, 185 ಕೋಟಿಗೂ ಮಿಕ್ಕಿ ದುಡಿಯುವ ಬಂಡವಾಳದೊoದಿಗೆ ಸತತ 12 ವರ್ಷಗಳಿಂದ ‘ಅ’ ತರಗತಿ ಆಡಿಟ್ ವರ್ಗೀಕರಣ ಹೊಂದಿರುತ್ತದೆ. 2021-22ನೇ ಸಾಲಿನಲ್ಲಿ ಶೇ.96.25ರಷ್ಟು ಸಾಲ ವಸೂಲಾತಿಯೊಂದಿಗೆ 3.25ಕೋಟಿ ಲಾಭವನ್ನು ಗಳಿಸಿ ಇನ್ನಿತರ ಸಹಕಾರಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಲ್ಲಿs ಸಂಘವು ಮುಂಚೂಣಿಯಲ್ಲಿದೆ. ಸಂಘದ ಅತ್ಯುತ್ತಮ ಕಾರ್ಯ ವೈಖರಿಯನ್ನು ಮತ್ತು ಸರ್ವಾಂಗೀಣ ಅಭಿವೃದ್ಧಿಯನ್ನು ಗುರುತಿಸಿ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿ. ಬೆಂಗಳೂರು ಇವರು 2020-21ನೇ ಸಾಲಿನಲ್ಲಿ “ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ”ವೆAದು, ಪ್ರಶಸ್ತಿಗೆ ಆಯ್ಕೆ ಮಾಡಿದೆ. ಕೇಂದ್ರ ಸರಕಾರದ ಯೋಜನೆಯಾದ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರವನ್ನು ರಾಜ್ಯದಲ್ಲೇ ಪ್ರಪ್ರಥಮವಾಗಿ ಸಹಕಾರಿ ಸಂಸ್ಥೆಯು ಅನುಷ್ಠಾನಕ್ಕೆ ತಂದಿರುವ ಬಗ್ಗೆ ಹಾಗೂ ತನ್ನದೇ ವಿಶಿಷ್ಟ ಯೋಜನೆಯಾದ ರೈತ ಸಂಜೀವಿನಿ ಕ್ರೆಡಿಟ್ ಕಾರ್ಡ್ ವಿತರಿಸಿದ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ., ಕೊಡಿಯಾಲ್‌ಬೈಲ್, ಮಂಗಳೂರು ಇವರು “ವಿಶೇಷ ಸಾಧಕ” ಪ್ರಶಸ್ತಿಗೂ ಆಯ್ಕೆ ಮಾಡಿರುತ್ತಾರೆ. ಈ ಹಿನ್ನಲೆಯಲ್ಲಿ ದಿನಾಂಕ 05.08.2022ರಂದು ಜರಗಿದ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಮಹಾಸಭೆಯಲ್ಲಿ ಅಧ್ಯಕ್ಷ ಡಾ. ಎಂ.ಎನ್.ರಾಜೇoದ್ರಕುಮಾರ್ ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಜಿ. ತಿಮ್ಮ ಪೂಜಾರಿ, ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿಯವರಾದ ಶರತ ಕುಮಾರ್ ಶೆಟ್ಟಿ ಇವರಿಗೆ ಪ್ರಶಸ್ತಿ ಮತ್ತು ಸ್ಮರಣಿಕೆಯನ್ನು ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ರವೀಂದ್ರ ಕಾಮತ್ ಮತ್ತು ಬಿ. ವಸಂತ ಶೆಟ್ಟಿ ಇವರು ಉಪಸ್ಥಿತರಿದ್ದರು.
ಕೋಟ ಸಹಕಾರಿ ವ್ಯವಸಾಯಕ ಸಂಘಕ್ಕೆ ಅತ್ಯತ್ತುಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ”ವೆoದು, ಪ್ರಶಸ್ತಿಗೆ ಆಯ್ಕೆ ಮಾಡಿ ಪ್ರಶಸ್ತಿ ನೀಡಿ ಗೌರವಿಸಿದೆ.

